ಗೃಹ ಸಚಿವರ ತವರಲ್ಲೇ ಸೋರುತಿಹುದು ಪೊಲೀಸ್ ಠಾಣೆ ಮಾಳಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

article

– ಸಿಎಸ್ ಕುಮಾರ್ ಚೇಳೂರು

ಬ್ರಿಟೀಷರ ಕಾಲದ ಸೋರುವ ಪೊಲೀಸ್ ಠಾಣೆಗಳು ಒಂದೆಡೆಯಾದರೆ ಈ ಹಳೆಯ ಕಟ್ಟಡಗಳಲ್ಲಿ ದಿನವೂ ಆತಂಕದಲ್ಲೇ ಕೆಲಸ ನಿರ್ವಹಿಸುವ ಸ್ಥಿತಿಯಿಂದ ಪೊಲೀಸರನ್ನು ಮುಕ್ತಗೊಳಿಸುವವರೇ ಗೃಹ ಸಚಿವರು..? ಬೆಂಗಳೂರಿಗೆ ಪರ್ಯಾಯವಾಗಿ ಶರವೇಗದಲ್ಲಿ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ಇರುವ ಹಳೇಯ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಸುತ್ತಿರುವ ಸಿಬ್ಬಂದಿಗಳ ಸ್ಥಿತಿ ಅಯೋಮಯವಾಗಿದೆ.  ಇಂತಹ ಕಟ್ಟಡಗಳಿಗೆ ನಮ್ಮ ಜಿಲ್ಲೆಯವರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಕ್ತಿ ನೀಡಿ ನೂತನ ಯೋಜನೆಗಳಿಗೆ ಚಾಲನೆ ನೀಡಿಯಾರೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ಹಳೆಯ ಕಟ್ಟಡಗಳಿಂದ ಮುಂದಾಗುವ ಅನಾಹುತ ತಪ್ಪಿಸಿಕೊಳ್ಳಲು ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ ಇದನ್ನು ರಾಜ್ಯದ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

“ಠಾಣೆಗಳ ಅವ್ಯವಸ್ಥೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಪತ್ರಿಕೆಯೊಂದಿಗೆ ಮಾತನಾಡಿ, ಠಾಣೆ ಕಟ್ಟಡಗಳ ಸ್ಥಿತಿ ಶೋಚನೀಯವಾಗಿದೆ. ವಸತಿಗೃಹಗಳು ಹಾಳಾಗಿವೆ. ವಸ್ತು ಸ್ಥಿತಿ ಬಗ್ಗೆ ಸರ್ಕಾರಕ್ಕೆ ಹಾಗೂ ಗೃಹ ಸಚಿವರ  ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.”

article-1

ತುಮಕೂರು ನಗರಸಭೆ ಈಗ ಮಹಾನಗರ ಪಾಲಿಕೆಯಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ ಸಂಚಾರಿ ವ್ಯವಸ್ಥೆ ಹದಗೆಡುತ್ತಿದೆ ಇದಕ್ಕೆ ಮೂಲ ಕಾರಣ ಅವೈಜ್ಞಾನಿಕ ತೀರ್ಮಾನಗಳು ಎಂದು ಹೇಳಲಾಗುತ್ತಿದೆ. ಇದನ್ನು ನಿರ್ವಹಣೆ ಮಾಡುವ ಸಿಬ್ಬಂದಿ ರೋಸಿ ಹೋಗಿದ್ದಾರೆ. ಒಂದು ಕಡೆ ಒತ್ತಡದಲ್ಲಿ ಕರ್ತವ್ಯ ನಿರ್ವಹಣೆ ಒಂದು ಎಡೆ ಆದರೆ ಮಳೆ ಬಂದರೆ ಸೋರುವ ಕಟ್ಟಡಗಳ ಸಮಸ್ಯೆ ಇನ್ನೊಂದು ಕಡೆ ಆಗಿದೆ. ಜಿಲ್ಲೆಗೆ ಮಹಿಳಾ ಪೊಲೀಸ್ ಠಾಣೆ ಮಂಜೂರಾಯಿತು. ನಂತರ ಠಾಣೆಗೆ ಜಾಗವಿಲ್ಲದೆ ಇರುವ ಪರಿಣಾಮ ತುಮಕೂರು ನಗರದ ಡಿವೈಎಸ್ಪಿಯವರು ಕಛೇರಿಯನ್ನು ಬಿಟ್ಟು ಕೊಡಲಾಯಿತು ಸಂಚಾರಿ ಪೊಲೀಸ್ ಠಾಣೆ, ಇಲ್ಲಿಯೇ ಇದ್ದವು.
ನಂತರ ಕಳೆದ ಬಾರಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಬಾರ್‍ಲೈನ್‍ನಲ್ಲಿ ಇರುವ ನೂತನ ಕಟ್ಟಡಕ್ಕೆ ಚಾಲನೆ ನೀಡಿದ್ದರು. ಇಲ್ಲಿ ಎರಡು ಸಂಚಾರಿ ಪೊಲೀಸ್ ಠಾಣೆ, ಇನ್ಸ್‍ಪೆಕ್ಟರ್ ಕಚೇರಿ ಸೇರಿದಂತೆ ಮೂರು ಠಾಣೆಗಳು ಈ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಅದರೆ ಇಲ್ಲಿ ಅಪಘಾತ ಸಂಭವಿಸಿದ ವಾಹನಗಳು ರಸ್ತೆಯಲ್ಲಿ ನಿಲ್ಲಿಸುವುದರಿಂದ ಸಾಕಷ್ಟು ಸಂಚಾರಿ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇದರಿಂದ ಸಾರ್ವಜನಿಕರು ದೂರು ನೀಡಿದ್ದಾರೆ. ಕೂಡಲೇ ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳು ತೆರವುಗೊಳಿಸಲು ಜಾಗವಿಲ್ಲದೆ ಇರುವ ಪರಿಣಾಮ ಪೊಲೀಸರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತುಮಕೂರು ನಗರದಲ್ಲಿ ಇರುವ ನಗರ ಠಾಣೆ, ತಿಲಕ್ ಪಾರ್ಕ್ ವೃತ್ತ ನೀರಿಕ್ಷಕರ ಕಛೇರಿ, ನಗರ ಠಾಣೆ ಸಂಪೂರ್ಣವಾಗಿ ಶಿಥಿಲಗೊಂಡಿದೆ.ಯಾವಾಗ ಕುಸಿದು ಬೀಳುತ್ತವೆಯೋ ಎಂಬ ಆತಂಕ ಮೂಡಿಸಿದೆ. ನಗರ ಠಾಣೆಯ ಹಿಂಬಾಗ ವಿರುವ ಪೊಲೀಸರ ರೆಸ್ಟ್ ರೂಂ ಕುಸಿದು ಬೀಳುತ್ತದೆ ಎಂಬ ಹಿನ್ನೆಲೆಯಲ್ಲಿ ಕಬ್ಬಿಣದ ಪೈಪುಗಳನ್ನು ಕುಸಿದು ಬೀಳುತ್ತದೆ ಎಂದು ಸಪೊೀರ್ಟ್ ನೀಡಲಾಗಿದೆ. ಒಳ ಹೋಗಲು ಹೆದರಿಕೆಯಾಗುತ್ತದೆ. ಆದ್ದರಿಂದ ಇದರ ಹಿಂದೆ ಇರುವ ಹಳೇ ಸಂಚಾರಿ ಪೊಲೀಸ್ ಠಾಣೆಯ ಜಾಗ ವಿಶಾಲವಾಗಿದೆ ಶಿಥಿಲವಾಗಿರುವ ಈ ಕಟ್ಟಡಗಳನ್ನು ತೆರವುಗೊಳಿಸಿ ಒಂದೇ ಜಾಗದಲ್ಲಿ ನಗರ ಠಾಣೆ, ಇನ್ಸ್‍ಪೆಕ್ಟರ್ ಕಚೇರಿ , ಡಿವೈಎಸ್ಪಿ ಕಛೇರಿ ಇದ್ದರೆ ಜನರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿ ಡಾ ದಿವ್ಯ ಗೋಪಿನಾಥ್ ಹಾಗೂ ಡಿವೈ ಎಸ್ಪಿ ನಾಗರಾಜ್, ವೃತ್ತನೀರಿಕ್ಷಕ ಚಂದ್ರಶೇಖರ್ ಇವರು ಮಾಸ್ಟರ್ ಪ್ಲಾನ್ ರಚಿಸುವ ಮೂಲಕ ಕೇಂದ್ರೀಯ ವಲಯದ ಐಜಿಪಿಯವರಿಗೆ ವರದಿ ರವಾನಿಸಿದ್ದಾರೆ. ಇದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ ಹಣಕಾಸು ಇಲಾಖೆಯ ಅಧಿಕೃತ ಒಪ್ಪಿಗೆ ಬಾಕಿ ಇದೆ.

ಇನ್ನು ಹೊಸ ಬಡಾವಣೆ ಪೊಲೀಸ್ ಠಾಣೆ ಸಂಪೂರ್ಣವಾಗಿ ಶಿಥಿಲವಾಗಿದೆ.ಅದನ್ನು ತೆರವುಗೊಳಿಸಲೂ ಕ್ರಮ ಕೈಗೊಂಡಿದ್ದಾರೆ.ಅಲ್ಲದೆ ತಿಲಕ್ ಪಾರ್ಕ್ ವೃತ್ತನೀರಿಕ್ಷಕರ ಕಛೇರಿ ತೆರವು ಗೊಳಿಸಲು ಸಿದ್ದತೆ ಕೈಗೊಂಡಿದ್ದಾರೆ.  ಒಟ್ಟು ಬ್ರಿಟೀಷರ ಕಾಲದಲ್ಲಿ ಹೆಂಚಿನಿಂದ ಕಟ್ಟಿದ್ದ ಈ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವುದಲ್ಲದೆ ಸುಸಜ್ಜಿತವಾದ ಕಟ್ಟಡಗಳನ್ನು ನಿರ್ಮಾಣ ಮಾಡಲೂ ಎಸ್ಪಿಯವರು ರಾಜ್ಯ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ. ಜಿಲ್ಲೆಯವರೇ ಆದ ಡಾ.ಜಿ.ಪರಮೇಶ್ವರ್ ಎರಡನೆ ಬಾರಿ ಗೃ ಸಚಿವರಾಗಿದ್ದಾರೆ ಅಲ್ಲದೆ ಉಪ ಮುಖ್ಯಮಂತ್ರಿಗಳು ಆಗಿರುವ ಅವರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಆಸ್ತಿಗಳ ರಕ್ಷಣೆ, ಹಳೆಯ ವಸತಿ ಗೃಹಗಳನ್ನು ತೆರವುಗೊಳಿಸುವುದು ಸಿಬ್ಬಂದಿಗಳು ಸೂಕ್ತ ಸೂರುಗಳನ್ನು ಕಟ್ಟಿಸಲೂ ಸಚಿವರು ಗಮನ ಸೆಳೆಯುವಂತೆ ಮಾಡಿದ್ದಾರೆ.
ಇದಕ್ಕೆ ಕೇಂದ್ರೀಯ ವಲಯದ ಐಜಿಪಿಯವರು ಹಾಗೂ ಪೊಲೀಸ್ ಮಹಾ ನಿರ್ದೇಶಕರು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಿಲ್ಲೆ ಹಾಗೂ ರಾಜ್ಯದಲ್ಲಿ ಇರುವ ಹಳೆಯ ಪೊಲೀಸ್ ಠಾಣೆಗಳಿಗೆ ಮುಕ್ತಿ ನೀಡುವ ಕೆಲಸವೂ ಆಗಬೇಕಿದೆ.

Facebook Comments

Sri Raghav

Admin