‘ನರಕದ ಬಾಗಿಲು’ ಮೂಲಕ 2019ರ ಮಹಾಸಮರಕ್ಕೆ ಮೋದಿ ರಣಕಹಳೆ

ಈ ಸುದ್ದಿಯನ್ನು ಶೇರ್ ಮಾಡಿ

Modi--0001
ಮಘರ್, ಜೂ.26-ಪ್ರಧಾನಮಂತ್ರಿ ಹುದ್ದೆಗೇರಲು ನರೇಂದ್ರ ಮೋದಿ ಅವರು 2014ರಲ್ಲಿ ಮೋಕ್ಷದ ತಾಣವೆಂದೇ ಪರಿಗಣಿಸಲಾದ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ವ್ಯತಿರಿಕ್ತ ಎಂಬಂತೆ 2019ರ ಸಾರ್ವತ್ರಿಕ ಮಹಾಸಮರದಲ್ಲಿ ಉತ್ತರ ಪ್ರದೇಶದಲ್ಲಿರುವ ನರಕದ ಬಾಗಲು ಎಂದೇ ಗುರುತಿಸಲಾಗಿರುವ ಮಘರ್‍ನಿಂದ ಮೋದಿ ಚುನಾವಣಾ ಪಾಂಚಜನ್ಯ ಮೊಳಗಿಸಲಿದ್ದಾರೆ.

ಮಘರ್-ಉತ್ತರ ಪ್ರದೇಶದ ರಾಜಧಾನಿ ಲಕ್ನೋನಿಂದ 250 ಕಿ.ಮೀ.ದೂರದಲ್ಲಿ ಗೋರಖ್‍ಪುರ್‍ಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಘರ್, ಪೌರಾಣಿಕ ಮತ್ತು ಚಾರಿತ್ರಿಕ ಐತಿಹ್ಯದ ಸ್ಥಳ. ಇದು ಮಹಾತ್ಮ ಸಂತ ಕಬೀರ್‍ರವರ ಮಹಾ ಪರಿನಿರ್ವಾಣ ಸ್ಥಳ. ಇದಕ್ಕೆ ಗೇಟ್ ವೇ ಆಫ್ ಹೆಲ್ (ನರಕದ ಬಾಗಿಲು ಅಥವಾ ನಾಕದ ದ್ವಾರ) ಎಂಬ ಅನ್ವರ್ಥನಾಮವೂ ಈ ಸ್ಥಳಕ್ಕಿದೆ. ಅಲ್ಲದೇ ಇದು ಹಿಂದು ಮತ್ತು ಮುಸ್ಲಿಮರ ಸೌಹಾರ್ದತೆಯ ಪವಿತ್ರ ಸ್ಥಳವೂ ಆಗಿದೆ.

ಇಲ್ಲಿ ಮಡಿದವರು ನರಕಕ್ಕೆ ಹೋಗುತ್ತಾರೆ ಎಂಬ ಮೂಢನಂಬಿಕೆಯನ್ನು ದೂರ ಮಾಡಲು ಪ್ರಾತಃಸ್ಮರಣೀಯ ಕಬೀರ್ ಮಹಾತ್ಮರು 15ನೇ ಶತಮಾನದಲ್ಲಿ ತಮ್ಮ ಜೀವನದ ಕೊನೆಯುಸಿರೆಳೆದರು. ಆಗಿನಿಂದಲೂ ಇದು ನರಕದ ಬಾಗಿಲು ಎಂದೇ ಪರಿಗಣಿತವಾಗಿದ್ದರೂ, ಈ ಸ್ಥಳವು ಮಂಗಳಪ್ರದ ಎಂಬ ನಂಬಿಕೆಯೂ ಅನೇಕರಲ್ಲಿದೆ.

2014ರಲ್ಲಿ ಮೋದಿ ಮೋಕ್ಷದ ಮಹಾದ್ವಾರ ವಾರಣಾಸಿ ಮೂಲಕ ತಮ್ಮ ಲೋಕಸಭಾ ಚುನಾವಣಾ ಅಭಿಯಾನ ಆರಂಭಿಸಿ ದಿಗ್ವಿಜಯ ಸಾಧಿಸಿದ್ದರು. ಆದರೆ ಅದಕ್ಕೆ ತೀರಾ ವಿಭಿನ್ನವಾಗಿ ಅವರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ನರಕದ ಬಾಗಿಲು ಮಘರ್ ಮೂಲಕ ರಣಕಹಳೆ ಮೊಳಗಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಪ್ರಧಾನಿ ಮೋದಿ ಗುರುವಾರ ಮೆಘರ್‍ನ ಸಂತ ಕಬೀರ್ ಮಹಾ ಪರಿನಿರ್ವಾಣ ಸ್ಥಳದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆ ಪ್ರಚಾರಕ್ಕೆ ವಿಧ್ಯುಕ್ತ ಮುನ್ನುಡಿ ಬರೆಯಲಿದ್ದಾರೆ.ಕಬೀರರು ವಾರಣಾಸಿಯಲ್ಲಿ ಜನಿಸಿ, ಮಘರ್‍ನಲ್ಲಿ ವಿಧಿವಶರಾಗಿದ್ದರು. ಇದೇ ವರ್ಷ ಕಬೀರರ 620ನೇ ಜನ್ಮ ವರುಷ ಹಾಗೂ 500ನೇ ಮಹಾ ಪರಿನಿರ್ವಾಣ ಸಂವತ್ಸರವನ್ನಾಗಿ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಗುರುವಾರ ಮೋದಿ ಕೆಲವು ವಿದ್ಯುಕ್ತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಕಬೀರ್ ಸಂಶೋಧನಾ ಸಂಸ್ಥೆಗೆ ಅವರು ಶಿಲಾನ್ಯಾಸ ನೆರವೇರಿಸಿ. ಸಂತರ ಏಕತೆ, ಸೌಹಾರ್ದತೆ ಮತ್ತು ಸಮಗ್ರತೆ ಸಂದೇಶಗಳ ಮೂಲಕ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ.

ಈಗಾಗಲೇ ಮಘರ್‍ನಲ್ಲಿ ಮೋದಿ ಅವರು ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಇಲ್ಲಿನ ಜನರಿಗೆ ಪ್ರಧಾನಿ ಅವರು ಬಹು ಪ್ರಿಯರಾಗಿದ್ದಾರೆ ಎಂದು ಸಂತ ಕಬೀರ್ ನಗರದ ಬಿಜೆಪಿ ಸಂಸದ ಶರದ್ ತ್ರಿಪಾಠಿ ಹೇಳಿದ್ದಾರೆ.

Facebook Comments

Sri Raghav

Admin