ಈ ದೇಶದಲ್ಲಿ ವಿಶೇಷವಾಗಿ ಆಚರಿಸುತ್ತಾರೆ ಕಾರ್ಟೂನಿನ ಜನ್ಮ ದಿನವನ್ನು..!

ಈ ಸುದ್ದಿಯನ್ನು ಶೇರ್ ಮಾಡಿ

Ds-1

ಒಂದೊಂದು ದೇಶಗಳಲ್ಲಿ ಒಂದೊಂದು ಕಾರ್ಟೂನ್ ಪಾತ್ರಗಳು ಜನಪ್ರಿಯ. ಸ್ಮಫ್ರ್ಸ್ ಬೆಲ್ಜಿಯಂನ ಪ್ರಸಿದ್ಧ ಕಾಮಿಕ್ ಪಾತ್ರಧಾರಿ. ಇದು ಸೃಷ್ಟಿಯಾಗಿ 60 ವರ್ಷಗಳಾಗಿವೆ. ಸ್ಮಫ್ರ್ಸ್ ಜನ್ಮದಿನವನ್ನು ಬೆಲ್ಜಿಯಂನಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.  ಸ್ಮಫ್ರ್ಸ್-ಬೆಲ್ಜಿಯಂನ ಪ್ರಸಿದ್ಧ ಕಾಮಿಕ್ ಪಾತ್ರಧಾರಿ. ಮಕ್ಕಳಿಗಂತೂ ಇದು ಬಲು ಅಚ್ಚುಮೆಚ್ಚು. ಪುಟ್ಟ, ನೀಲಿ ಬಣ್ಣದ ಮನುಷ್ಯರಂತೆ ಕಾಣುವ ಈ ಜೀವಿ ಅರಣ್ಯದಲ್ಲಿ ಅಣಬೆಯಾಕಾರದ ಮನೆಗಳಲ್ಲಿ ವಾಸಿಸುತ್ತವೆ ಎಂಬ ಕಾಲ್ಪನಿಕ ಕಥೆ ಇದೆ. 1958ರಲ್ಲಿ ಸ್ಮಫ್ರ್ಸ್ ಬೆಲ್ಜಿಯಂನಲ್ಲಿ ಸೃಷ್ಟಿಯಾಯಿತು. ಈಗ ಇದಕ್ಕೆ 60 ವರ್ಷಗಳ ಹುಟ್ಟು ಹಬ್ಬದ ಸಡಗರ-ಸಂಭ್ರಮ.

ಬೆಲ್ಜಿಯಂನ ವಿವಿಧ ನಗರಗಳಲ್ಲಿ ಸ್ಮಫ್ರ್ಸ್ ಕಾರ್ಟೂನ್ ಹೀರೋ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಈ ಪ್ರಾಣಿ ವಾಸಿಸುವ ಅರಣ್ಯ ವಾತಾವರಣದ ಅನುಭವ ನೀಡುವ ಪರಿಸರವನ್ನು ಈ ಉದ್ದೇಶಕ್ಕಾಗಿ ಸೃಷ್ಟಿಸಲಾಗಿತ್ತು. ಸ್ಮಫ್ರ್ಸ್ ಅಭಿಮಾನಿಗಳು ಅಣಬೆಯಾಕಾರದ ಮನೆಗಳು ಮತ್ತು ಗುಹೆಗಳಲ್ಲಿ ವಚ್ರ್ಯುಯಲ್ ರಿಯಾಲಿಟಿ ರೈಡ್ ಮೂಲಕ ಸಂಭ್ರಮಿಸಿದರು.  ವ್ಯಂಗ್ಯಚಿತ್ರ ಕಲಾವಿದ ಪೀಯರೆ ಕುಲ್ಲಿಫೋರ್ಡ್ 1958ರಲ್ಲಿ ಸೃಷ್ಟಿಸಿದ ಸ್ಮಫ್ರ್ಸ್ ಪಾತ್ರ 60 ವರ್ಷಗಳ ಬಳಿಕವೂ ಜನಪ್ರಿಯತೆಯಲ್ಲೇ ಸಾಗಿದೆ.

Ds
ಅವರು ಮಧ್ಯಕಾಲೀನ ಹೀರೋಗಳಾದ ಜೊಹಾನ್ ಮತ್ತು ಪೀವಿಟ್ ಅವರೊಂದಿಗೆ ತಮ್ಮ ಕಾಮಿಕ್‍ನಲ್ಲಿ ಈ ಜೀವಿಯನ್ನು ಸಹ ಪರಿಚಯಿಸಿ ದ್ದರು. ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್‍ನಲ್ಲಿ ನಡೆದ ಎಕ್ಸ್‍ಪೋದಲ್ಲಿ ಸ್ಮಫ್ರ್ಸ್ ಅರಣ್ಯ, ಗ್ರಾಮ ಹಾಗೂ ದೊಡ್ಡ ಅಣಬೆಯಾಕಾರದ ಮನೆಗಳು, ಸ್ಮಫ್ರ್ಸ್ ವೈರಿ ಗಾರ್ಗಮೆಲ್ ಪಾತ್ರವನ್ನು ಮರು ಸೃಷ್ಟಿಸಲಾಯಿತು. ಇವುಗಳನ್ನು ವೀಕ್ಷಿಸಿ ಮಕ್ಕಳದೊಂದಿಗೆ ದೊಡ್ಡವರೂ ಸಹ ವಿಶಿಷ್ಟ ಅನುಭವ ಹೊಂದಿದರು. ಐದು ದಶಲಕ್ಷ ಯೂರೋ ಮೌಲ್ಯದ ಈ ವಸ್ತುಪ್ರದರ್ಶನದಲ್ಲಿ ವಿಡಿಯೋ ಮಾಪಿಂಗ್ ಮತ್ತು ವಚ್ರ್ಯುಯಲ್ ರಿಯಾಲಿಟಿ ಸೇರಿದಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಲಾಗಿದೆ.
ಮುಂದಿನ ವರ್ಷ ಜನವರಿವರೆಗೆ ಈ ಪ್ರದ ರ್ಶನ ನಡೆಯಲಿದೆ. ಮುಂಬರುವ ವರ್ಷಗಳಲ್ಲಿ ಯುರೋಪ್‍ನ ಇತರ ದೇಶಗಳು, ಅಮೆರಿಕ ಮತ್ತು ಏಷ್ಯಾ ರಾಷ್ಟ್ರಗಳಲ್ಲೂ ಸ್ಮಫ್ರ್ಸ್ ಎಕ್ಸ್‍ಪೋ  ಪ್ರದರ್ಶಿ ಸಲು ಸಂಘಟಕರು ಯೋಜನೆ ರೂಪಿಸಿದ್ದಾರೆ.

Facebook Comments

Sri Raghav

Admin