ಕ್ಯಾನ್ಸರ್ ನಿಂದ ದೂರವಿರಲು ಈ ಆಹಾರಗಳನ್ನ ಸೇವಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Health-2
ಅತಿಯಾದ ಕೊಬ್ಬು ಇರುವ ಹಾಗೂ ಸ್ಥೂಲಕಾಯಕ್ಕೆ ಕಾರಣವಾಗುವ ಆಹಾರ ಪದಾರ್ಥಗಳು ದೊಡ್ಡ ಕರುಳು, ಗರ್ಭಕೋಶ, ಪ್ರೊಸ್ಟೇಟ್ ಮತ್ತು ಚರ್ಮ ಕ್ಯಾನ್ಸರ್‍ಗಳ ಸಾಧ್ಯತೆಯನ್ನು ಹೆಚ್ಚಾಗಿಸುತ್ತದೆ ಎಂದು ಅನೇಕ ಸಂಶೋಧನೆ ಅಧ್ಯಯನಗಳು ತಿಳಿಸಿವೆ. ಆಹಾರದಲ್ಲಿ ಕೊಬ್ಬಿನಂಶದ ಒಟ್ಟು ಕ್ಯಾಲೋರಿಯಲ್ಲಿ ಶೇ.30ಕ್ಕಿಂತ ಮೀರಬಾರದು. ಕೊಬ್ಬಿನಂಶದ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಲು ಕೆಲವು ಬದಲಾವಣೆಗಳನ್ನು ಮಾತ್ರ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ವಾರದಲ್ಲಿ ಹಲವಾರು ಬಾರಿ ತರಕಾರಿಗಳನ್ನು ಸೇವಿಸಿ, ಬೇಕಿಂಗ್ ಮತ್ತು ಸ್ಟೀಮಿಂಗ್‍ನಂಥ ಕಡಿಮೆ ಕೊಬ್ಬು ವಿಧಾನದ ಆಹಾರ ತಯಾರಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಿ. ಎಣ್ಣೆ, ಬೆಣ್ಣೆ ಇತ್ಯಾದಿಯಂಥ ಹೆಚ್ಚುವರಿ ಕೊಬ್ಬಿನ ಬಳಕೆಯನ್ನು ಮಿತಿಗೊಳಿಸಿ.

ಅಧಿಕ ಫೈಬರ್‍ಯುಕ್ತ ಆಹಾರ ಸೇವಿಸಿ. ಫೈಬರ್ ಸಮೃದ್ಧ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೊಡ್ಡ ಕರುಳಿನ ಮೂಲಕ ತ್ಯಾಜ್ಯಗಳು ಹೋಗುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸುತ್ತದೆ. ಇದರಿಂದಾಗಿ ಅದಕ್ಕೆ ಸಂಬಂಧಪಟ್ಟ ಕ್ಯಾನ್ಸರ್ ಗಂಡಾಂತರಗಳು ಕಡಿಮೆಯಾಗುತ್ತವೆ. ಅಧಿಕ ಫೈಬರ್ ಇರುವ ಮತ್ತು ಕಡಿಮೆ ಕ್ಯಾಲೋರಿ ಆಹಾರ ಪದಾರ್ಥಗಳು ದೇಹದ ಅಧಿಕ ಕೊಬ್ಬಿನಿಂದ ಉಂಟಾಗುವ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ.

Health-1

Facebook Comments

Sri Raghav

Admin