ಪುಟಿದೆದ್ದ ಮೆಸ್ಸಿ ಪಡೆ, ನಾಕೌಟ್ ಹಂತಕ್ಕೇರಿದ ಅರ್ಜೆಂಟಿನಾ

ಈ ಸುದ್ದಿಯನ್ನು ಶೇರ್ ಮಾಡಿ

Messi--01

ಸೇಂಟ್ ಪೀಟರ್ಸ್‍ಬರ್ಗ್, ಜೂ.27-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ 2018ರಲ್ಲಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಲಿಯೋನೆಲ್ ಮೆಸ್ಸಿ ನೇತೃತ್ವದ ಪಡೆ ಪುಟಿದೆದ್ದಿದೆ. ಡಿ-ಗ್ರೂಪ್‍ನ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ನೈಜೀರಿಯಾ ವಿರುದ್ಧ 2-1 ಗೋಲಿನಿಂದ ಜಯ ಸಾಧಿಸಿತು.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೈಜೀರಿಯಾ ವಿರುದ್ದ ಮೆಸ್ಸಿ ಬಾರಿಸಿದ ಗೋಲು 2018ರ ಫಿಫಾ ವಿಶ್ವಕಪ್‍ನ 100ನೇ ಗೋಲು ಆಗಿದೆ. ಅರ್ಜೆಂಟೀನಾ ಮೂರು ಪಂದ್ಯಗಳಲ್ಲಿ ತಲಾ ಒಂದು ಗೆಲುವು, ಒಂದು ಸೋಲು ಮತ್ತು ಒಂದು ಡ್ರಾ ಫಲಿತಾಂಶದೊಂದಿಗೆ ಒಟ್ಟು ಮೂರು ಅಂಕಗಳನ್ನು ಗಳಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ನಾಕೌಂಟ್ ಹಂತಕ್ಕೇರಿದೆ.

ಡಿ-ಗ್ರೂಪ್‍ನಲ್ಲಿ ಅಗ್ರಸ್ಥಾನ ಪಡೆದ ಕ್ರೊವೇಷ್ಯಾದೊಂದಿಗೆ ಅಂತಿಮ 16ರ (ಪ್ರಿ ಕ್ವಾರ್ಟರ್) ಸುತ್ತಿಗೆ ಪ್ರವೇಶ ಪಡೆದ ಅರ್ಜೆಂಟೀನಾ, ಕ್ವಾರ್ಟರ್ ಫೈನಲ್ ಸ್ಥಾನಕ್ಕಾಗಿ ಬಲಿಷ್ಠ ಫ್ರಾನ್ಸ್ ವಿರುದ್ಧ ಸೆಣಸಲಿದೆ.  ಈ ಪಂದ್ಯ ತೀವ್ರ ರೋಚಕತೆಯಿಂದ ಕೂಡಿತ್ತು. ಪಂದ್ಯದ 14ನೇ ನಿಮಿಷದಲ್ಲಿ ಅರ್ಜೆಂಟೀನಾ ಗೋಲಿನ ಖಾತೆ ತೆರೆಯಿತು. ಈ ಪಂದ್ಯದಲ್ಲಿ ಮೆಸ್ಸಿ ಪುಟಿದೆದ್ದರು. ಅತ್ಯಂತ ಚಾಕಚಕ್ಯತೆಯಿಂದ ಚೆಂಡನ್ನು ನಿಯಂತ್ರಿಸಿದ ತಂಡದ ನಾಯಕ ಭರ್ಜರಿ ಗೋಲು ಬಾರಿಸಿದರು. ಈ ಗೋಲಿನೊಂದಿಗೆ ಮೆಸ್ಸಿ ಬಾರಿಸಿದ ಗೋಲು 2018ರ ಫಿಫಾ ವಿಶ್ವಕಪ್‍ನ ಶತಕದ ಗೋಲು ಎನಿಸಿದೆ.

ಈ ಗೋಲಿನೊಂದಿಗೆ ಪ್ರಥಮಾರ್ಧದ ಅಂತ್ಯಕ್ಕೆ 1-0 ಗೋಲಿನಿಂದ ಮುನ್ನಡೆ ಸಾಧಿಸಿದ ಅರ್ಜೆಂಟೀನಾ ಉತ್ತರಾರ್ಧದಲ್ಲಿ ನೈಜೀರಿಯಾದಿಂದ ತೀವ್ರ ಪ್ರತಿರೋಧ ಎದುರಿಸಿ ಆಘಾತ ಅನುಭವಿಸಿತು. 51ನೇ ನಿಮಿಷದಲ್ಲಿ ನೈಜೀರಿಯಾ ವಿಕ್ಟರ್ ಮೋಸೆಸ್ ತಮಗೆ ದೊರೆ ಪೆನಾಲ್ಟಿ ಅವಕಾಶವನ್ನು ನಿರರ್ಥಕಗೊಳಿಸದೇ ಗೋಲು ಬಾರಿಸಿ ಸಮಬಲ ಸಾಧಿಸಲು ನೆರವಾದರು. ತೀವ್ರ ಪೈಪೋಟಿಯ ಈ ಪಂದ್ಯದಲ್ಲಿ 86ನೇ ನಿಮಿಷದಲ್ಲಿ ಮಾರ್ಕೋಸ್ ರೊಜೋ, ಅರ್ಜೆಂಟೀನಾಗೆ ಆಪತ್ಬಾಂಧವರಾದರು. ಅವರ ಗೋಲಿನಿಂದ ರೋಚಕ ಜಯ ದಾಖಲಿಸಿದ ಅರ್ಜೆಂಟೀನಾ ನಾಕೌಟ್ ಹಂತಕ್ಕೇರಿತು.

Facebook Comments

Sri Raghav

Admin