ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿಲ್ಲ : ಸೇನಾ ಮುಖ್ಯಸ್ಥ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Bipin-rawath

ನವದೆಹಲಿ, ಜೂ.27-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ವಿಶ್ವಸಂಸ್ಥೆ ವರದಿಗಳ ಬಗ್ಗೆ ಕಿಡಿ ಕಾರಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಇದೊಂದು ಪ್ರೇರಿತ ವರದಿ ಎಂದು ಟೀಕಿಸಿದ್ದಾರೆ. ಜನರ ಜೀವ ಹಾಗೂ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಭಾರತೀಯ ಸೇನೆಯ ಸೇವೆ ಎಂಥಹುದ್ದು ಎಂಬುದು ಕಾಶ್ಮೀರ ಜನತೆಗೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಚೆನ್ನಾಗಿ ತಿಳಿಸಿದೆ. ಕಾಶ್ಮೀರದಲ್ಲಿ ನಮ್ಮ ಯೋಧರು ಯಾವುದೇ ಮಾನವ ಹಕ್ಕುಗಳನ್ನು ಉಲ್ಲಂಘಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ವಿಶ್ವಸಂಸ್ಥೆಯ ಕಪೋಲಕಲ್ಪಿತ ಮತ್ತು ಪ್ರೇರಿತ ವರದಿ ಎಂದು ಟೀಕಿಸಿದರು.

Facebook Comments

Sri Raghav

Admin