ತಿಪಟೂರಿನಲ್ಲಿ ಬಾಲ್ಯ ವಿವಾಹಗಳಿಗೆ ಬ್ರೇಕ್ ಹಾಕಿದ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

child-marriage

ತಿಪಟೂರು, ಜೂ.27- ತಾಲ್ಲೂಕಿ ನಲ್ಲಿ ಯಾರಿಗೂ ಹೇಳದೆ ಗೌಪ್ಯವಾಗಿ ಮಾಡುತ್ತಿದ್ದ ಮತ್ತೆರೆಡು ಬಾಲ್ಯ ವಿವಾಹಗಳನ್ನು ತಾಲ್ಲೂಕಿನ ಬಾಲ್ಯ ವಿವಾಹಾಧಿಕಾರಿಗಳ ತಂಡ ತಡೆ ಹಿಡಿದ ಘಟನೆ ನಡೆದಿದೆ. ತಿಪಟೂರು ನಗರದ 14 ವರ್ಷದ ಬಾಲಕಿಯನ್ನು 32 ವರ್ಷದ ತಿಪಟೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಯುವಕ ನೊಂದಿಗೆ ಜರುಗುತ್ತಿದ್ದ ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ. ಸದರಿ ಪ್ರಕರಣದಲ್ಲಿ ಬಾಲ್ಯವಿವಾಹಕ್ಕೆ ಎಲ್ಲಾ ಸಿದ್ಧತೆಗಳನ್ನು ತಯಾರಿ ಮಾಡಿಕೊಂಡಿದ್ದ ಸಂದರ್ಭದಲ್ಲಿ ನಿಲ್ಲಿಸಲಾಯಿತು.

ಮತ್ತೊಂದು ಪ್ರಕರಣದಲ್ಲಿ ಕೆಬಿ ಕ್ರಾಸ್ ವ್ಯಾಪ್ತಿಯ 17 ವರ್ಷದ ಬಾಲಕಿಯನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯುವಕನೊಂದಿಗೆ ನಡೆಯಬೇಕಾಗಿದ್ದ ಬಾಲ್ಯ ವಿವಾಹವನ್ನು ನಿಲ್ಲಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಪೋಷಕರಿಗೆ ಕಾನೂನಿನ ಅರಿವು ಇದ್ದರೂ ಬಾಲ್ಯ ವಿವಾಹ ಮಾಡುತ್ತಿರು ವುದು ತಿಳಿದು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಾನೂನು ಮನವರಿಕೆ ಮಾಡಿಕೊಟ್ಟು ಎಚ್ಚರಿಕೆ ನೀಡಲಾಗಿದೆ.

ತಾಲ್ಲೂಕಿನ ತಂಡ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಹಲವಾರು ಅಪ್ರಾಪ್ತ ಮದುವೆಗಳನ್ನು ನಿಲ್ಲಿಸಿ ಕಾನೂನಿನ ಬಗ್ಗೆ ತಿಳಿಸಿದರೂ ಕೆಲವು ಪೋಷಕರು ಕದ್ದು ಮುಚ್ಚಿ ಅಥವಾ ದೂರದ ಊರಿಗೆ ಹೋಗಿ ಗೌಪ್ಯವಾಗಿ ಮದುವೆ ಮಾಡಿಸಿ ಮದುವೆ ಯಾಗದವರಂತೆ ನಟಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಮಾಜದ ಎಲ್ಲಾ ನಾಗರಿಕರೂ ಮಾಹಿತಿ ನೀಡಲು 1098ಕ್ಕೆ ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡಲು ತಿಪಟೂರು ತಾಲ್ಲೂಕಿನ ಮಕ್ಕಳ ಸಹಾಯವಾಣಿ ನಿರ್ದೇಶಕರ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಎಸ್.ನಂದಕುಮಾರ್ ಮನವಿ ಮಾಡಿಕೊಂಡಿದ್ದಾರೆ.  ಎರಡೂ ಪ್ರಕರಣಗಳ ಪೋಷಕರಿಗೆ ಬಾಲ್ಯ ವಿವಾಹ ನಿಷೇದ ಕಾಯ್ದೆಯ ಕಾನೂನಿ ಶಿಕ್ಷೆಯ ಬಗ್ಗೆ, ಆರೋಗ್ಯ ಹಿನ್ನೆಲೆಯಲ್ಲಿ ಮನವರಿಕೆ ಮಾಡ ಲಾಗಿದೆ. ಪ್ರಕರಣಗಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ವರ್ಗಾಯಿಸಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸಿಡಿಪಿಒ ಓಂಕಾರಪ್ಪ, ಮಹಿಳಾ ಸಂರಕ್ಷಣಾಧಿಕಾರಿ ಶ್ರೀಲತಾ, ತಿಪಟೂರು ಗ್ರಾಮಾಂತರ ಠಾಣೆ ಮತ್ತು ಕೆಬಿ ಕ್ರಾಸ್ ಪೊ ಲೀಸ್ ಸಿಬ್ಬಂದಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಶಿಕ್ಷಣ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

Facebook Comments

Sri Raghav

Admin