ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 27-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಮಾತನಾಡಲೇಬೇಕಾಗುತ್ತದೆ. ಬೇರೆಯವರಿಂದ  ದೂಷಣೆಯನ್ನು ತಪ್ಪಿಸಿಕೊಳ್ಳುವುದು  ಹೇಗೆ? ಮಾತಿನ ಮತ್ತು ಸ್ತ್ರೀಯರ ಶುದ್ಧತೆಯ ವಿಚಾರದಲ್ಲಿ ಜನರು ದುಷ್ಟರಹಾಗೆ ವರ್ತಿಸುತ್ತಾರೆ. -ಉತ್ತರರಾಮಚರಿತ

Rashi

ಪಂಚಾಂಗ : 27.06.2018 ಬುಧವಾರ

ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಬೆ.06.11 / ಚಂದ್ರ ಅಸ್ತ ರಾ.05.53
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ದಶಿ (ಬೆ.8.13)
ನಕ್ಷತ್ರ:ಜ್ಯೇಷ್ಠಾ (ಬೆ.9.35) / ಯೋಗ: ಶುಕ್ಲ (ರಾ.1.36)
ಕರಣ: ವಣಿಜ್-ಭದ್ರೆ (ಬೆ.8.13-ರಾ.9.16) / ಮಳೆ ನಕ್ಷತ್ರ: ಆರಿದ್ರಾ
ಮಾಸ: ಮಿಥುನ, ತೇದಿ: 13

ಇಂದಿನ ವಿಶೇಷ: ಸಾಯನ ವೈಧೃತಿ ಬೆ.10.21, ವಟ ಸಾವಿತ್ರಿ ವ್ರತ, ಸತ್ಯನಾರಾಯಣ ಪೂಜಾ

ರಾಶಿ ಭವಿಷ್ಯ : 

ಮೇಷ : ಸ್ವಂತ ಕೆಲಸ-ಕಾರ್ಯಗಳಿಗಾಗಿ ಸಮಚಾರ ಮಾಡುವಿರಿ, ಧನಚಿಂತೆ ತುಸು ಕಡಿಮೆಯಾಗುತ್ತದೆ
ವೃಷಭ : ವೃತ್ತಿರಂಗದಲ್ಲಿ ಅಭಿವೃದ್ಧಿ ಸಾಧಿಸುವಿರಿ
ಮಿಥುನ: ಆಗಾಗ ನಿರೀಕ್ಷಿತ ಕೆಲಸ-ಕಾರ್ಯಗಳು ನಡೆಯಲಿವೆ
ಕಟಕ : ವಿದ್ಯಾರ್ಥಿಗಳಿಗೆ ಅವಕಾಶಗಳು ಒದಗಿ ಬರಲಿವೆ
ಸಿಂಹ: ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬಂದು ಕಂಕಣಬಲ ಪ್ರಾಪ್ತಿಯಾಗಲಿದೆ
ಕನ್ಯಾ: ದೇವತಾ ಕಾರ್ಯಗಳಿಗೆ ಹೆಚ್ಚು ಧನವ್ಯಯ ಮಾಡುವಿರಿ
ತುಲಾ: ಸಾಂಸಾರಿಕವಾಗಿ ನೆಮ್ಮದಿ ಇರುತ್ತದೆ, ತಂದೆ-ಮಕ್ಕ ಳೊಂದಿಗೆ ಭಿನ್ನಾಭಿಪ್ರಾಯ ತೋರಿ ಬರುತ್ತದೆ
ವೃಶ್ಚಿಕ : ಕೆಲಸ-ಕಾರ್ಯಗಳು ಅಡೆತಡೆಗಳಿಲ್ಲದೆ ನಡೆಯಲಿವೆ
ಧನುಸ್ಸು: ಕಾರ್ಯರಂಗದಲ್ಲಿ ಯಾರನ್ನೂ ನಂಬದ ಪರಿಸ್ಥಿತಿ ಇರುತ್ತದೆ
ಮಕರ: ಹಿತಶತ್ರುಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಒಳ್ಳೆಯದು
ಕುಂಭ: ವಿದ್ಯಾರ್ಥಿಗಳ ಅಭ್ಯಾಸ ಬಲ ಸಾರ್ಥಕವಾಗಲಿದೆ, ಆಗಾಗ ಅತಿಥಿಗಳ ಕಿರಿಕಿರಿ
ಮೀನ: ಧರ್ಮಪತ್ನಿಯೊಂದಿಗೆ ಹೆಚ್ಚು ಕಾಲ ಕಳೆಯುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin