ಉದ್ದಿಮೆಗಳಿಗೆ ನೆರವಾಗಿ, ನಿಯಮ ಪಾಲಿಸಿ : ಆರ್’ಬಿಐ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

kassia-2

ಬೆಂಗಳೂರು, ಜೂ.27- ಸಾಲ ನೀಡಿದ ಬ್ಯಾಂಕ್‍ಗಳಿಗೆ ಸರಿಯಾಗಿ ಮರುಪಾವತಿ ಮಾಡಿದರೆ ಮತ್ತಷ್ಟು ಸೇವೆ ವೃದ್ಧಿ ಮತ್ತು ಅನುಕೂಲವಾಗಲಿದೆ ಅಲ್ಲದೆ ಇದೇ ವೇಳೆ ಅರ್ಹರಿಗೆ ಸಾಲ ಸಿಗಬೇಕು ಎಂದು ರಿಸರ್ವ್ ಬ್ಯಾಂಕ್’ನ ಹಿರಿಯ ಅಧಿಕಾರಿ ರಾಜಗೋಪಾಲ್ ತಿಳಿಸಿದರು. ರಾಜಾಜಿನಗರದ ಅಭಿಮಾನಿ ವಸತಿಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ಟ್ರಾಟ್ ಅಪ್, ಉದ್ಯಮಿಮಿತ್ರ ಇತ್ಯಾದಿ ಯೋಜನೆ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬ್ಯಾಂಕುಗಳು ಸೇವೆಗಾಗಿಯೇ ಇದೆ. ಆದರೆ ಕೆಲವೊಂದು ಬಾರಿ ಸಾಲ ಪಡೆದರೂ ಮರುಪಾವತಿ ಮಾಡದೇ ತಪ್ಪಿಸಿಕೊಳ್ಳುತ್ತಾರೆ ಆಗ ಬ್ಯಾಂಕಿನ ಮೇಲೆ ಹೊರೆ ಹೆಚ್ಚಿ ಒತ್ತಡ ಉಂಟಾಗುತ್ತದೆ. ನಷ್ಟಕ್ಕೆ ಸಿಲುಕುತ್ತದೆ. ಇದನ್ನು ತಪ್ಪಿಸಲು ಬ್ಯಾಂಕುಗಳನ್ನು ಎಚ್ಚರಿಕೆ ವಹಿಸಬೇಕು ಜೊತೆಗೆ ಜನಸ್ನೇಹಿಯಾಗಬೇಕು ಎಂದು ಹೇಳಿದರು. ಆರ್‍ಟಿಎನ್ ನಿಯಮ ಕೆಲ ಬ್ಯಾಂಕ್‍ಗಳು ಪಾಲಿಸುತ್ತಿಲ್ಲ ಇದರ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಇದರ ವಿರುದ್ಧ ಕ್ರಮಕೈಗೊಳ್ಳುವ ಮುನ್ನ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು ಎಂದರು.

kassia-1
ಕಾಸಿಯಾ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಅರ್ಹರಿಗೆ ಬ್ಯಾಂಕಿನಿಂದ ಸ್ಪಂದನೆ ಸಿಗುತ್ತಿಲ್ಲ ಎಂಎಸ್‍ಎಂಇ ಕೇವಲ ದೊಡ್ಡ ಕಾರ್ಖಾನೆ ಉದ್ಯಮಿಗಳಿಗೆ ಮಾತ್ರ ಸಿಗುತ್ತಿದೆ, ನಯವಂಚಕರಿಗೂ ಅನುಕೂಲವಾಗುತ್ತಿದೆ. ಕಷ್ಟಪಟ್ಟು ದುಡಿಯುವ ಮನಸ್ಸಿರುವವರಿಗೆ ಅನುಕೂಲ ಫ್ರೋ ತ್ಸಾಹ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಸಣ್ಣ ಕೈಗಾರಿಕೆಗಳು ಕಷ್ಟದ ಹಾದಿಯಲ್ಲಿದೆ ಹೀಗೆ ಮುಂದುವರೆದರೆ ಬಾಗಿಲು ಮುಚ್ಚಿ ಬೀದಿಗೆ ಬೀಳುವ ಆತಂಕ ಎದುರಾಗಿದೆ ಎಂದರು.
ಸಾಲ ನೀಡಲು ಬ್ಯಾಂಕ್‍ನ ಅಧಿಕಾರಿಗಳು ಉದ್ದಿಮೆದಾರರನ್ನು ಅಲೆದಾಡಿಸಬಾರದು. ಬದಲಿಗೆ ಮಾರ್ಗದರ್ಶನ ಬೆಂಬಲವವಾಗಿ ನೀಡಬೇಕು ನಮ್ಮ ಬಳಿ ಕಣ್ಣೀರು ಹಾಕುತ್ತಾ ಅನೇಕರು ಬರುತ್ತಾರೆ ಇದನ್ನು ವಿಷಾದದಿಂದ ಹೇಳುತ್ತಿದ್ದೇವೆ, ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಿದರೆ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ, ರಾಜ್ಯ ದೇಶ ಉದ್ಧಾರವಾಗುತ್ತದೆ ಎಂದರು.

ಅಂಧ್ರಾಬ್ಯಾಂಕ್‍ನ ವಲಯ ಮುಖ್ಯ ಮಹಾಪ್ರಬಂಧಕ ಗೋಪಾಲಕೃಷ್ಣ ಮಾತನಾಡಿ, ನಮ್ಮ ಬ್ಯಾಂಕ್‍ನಿಂದ ಸಾರ್ವಜನಿಕರಿಗೆ ಉದ್ಯಮಿಗಳಿಗೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತಿದ್ದೇನೆ. ಗ್ರಾಹಕರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಬೆಂಗಳೂರಿನಲ್ಲಿ 125 ಶಾಖೆಗಳನ್ನು ಜನಸ್ನೇಹಿಯಾಗಿ ಪರಿವರ್ತಿಸಿ ಗ್ರಾಹಕರಿಗೆ, ತಂತ್ರಜ್ಞಾನ ಸೇವೆಯನ್ನು ಉತ್ತಮ ರೀತಿ ನೀಡುತ್ತಿದ್ದೇವೆ ಎಂದರು.

Facebook Comments