117 ವರ್ಷ ಬದುಕಿದ್ದ ಕ್ಯೂಬಾದ ಅತ್ಯಂತ ಹಿರಿಯ ಮಹಿಳೆ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Cuba--01
ಹವಾನ, ಜೂ.28-ದ್ವೀಪರಾಷ್ಟ್ರ ಕ್ಯೂಬಾದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ 117 ವರ್ಷಗಳ ಮರಿಯಾ ಎಮಿಲಿಯಾ ಕ್ವೆಸಾಡಾ ಬ್ಲಾಂಕೋ ನಿಧನರಾಗಿದ್ದಾರೆ. ಸೀನ್‍ಪ್ಯೂಗೊಸ್ ನಗರದ ತಮ್ಮ ಮನೆಯಲ್ಲಿ ಅವರು ಕೊನೆಯುಸಿರೆಳೆದರು. ವಿಧಿವಶರಾಗುವುದಕ್ಕೆ ಮುನ್ನ ಅವರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ಮಂಗಳವಾರ ಅವರ ಅಂತ್ಯಕ್ರಿಯೆ ನಡೆಯಿತು ಎಂದು ಸೆಪ್ಟೆಂಬರ್ ಫಿಫ್ತ್ ಎಂಬ ಸ್ಥಳೀಯ ದೈನಿಕ ವರದಿ ಮಾಡಿದೆ.

ಜನವರಿ 5, 1901ರಲ್ಲಿ ಜನಿಸಿದ್ದ ಅವರು ತಮ್ಮ ಜೀವಾವಧಿಯುದ್ದಕ್ಕೂ ಅತ್ಯಂತ ಆರೋಗ್ಯವಾಗಿದ್ದರು. ಆರೋಗ್ಯಕರ ಮಿತ ಆಹಾರ ಮತ್ತು ಹಾಸ್ಯ ಪ್ರಜ್ಞೆ ತಮ್ಮ ಆರೋಗ್ಯದ ಗುಟ್ಟು ಎಂದು ಅವರು ಹೇಳುತ್ತಿದ್ದರು. ಸಮಾಜಸೇವೆ, ದಾನ-ಧರ್ಮ-ಪರೋಪಕಾರಗಳಲ್ಲೂ ಗುರುತಿಸಿಕೊಂಡಿದ್ದ ಮರಿಯಾ ಅಪಾರ ದೈವಭಕ್ತರು. ಅವರು ಅವಿವಾಹಿತರು. ಅವರು ಪ್ರಶಾಂತ ಚಿತ್ತರಾಗಿ ಕೊನೆಯುಸಿರೆಳೆಯುವಾಗ ಹತ್ತಿರದ ಸಂಬಂಧಿಗಳು ಮರಿಯಾರನ್ನು ಸುತ್ತುವರಿದಿದ್ದರು.

ಮರಿಯಾ ತಂದೆ-ತಾಯಿಗೆ ಇವರು 13ನೇ ಪುತ್ರಿಯಾಗಿದ್ದರು. ಇವರ ಸಹೋದರ-ಸಹೋದರಿಯರೆಲ್ಲರೂ ದೀರ್ಘಾಯುಷಿಗಳು ಎಂಬುದು ವಿಶೇಷ. ಇವರಲ್ಲಿ ಬಹುತೇಕರು 90 ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿದ್ದರು. ಮರಿಯಾಗೆ 115 ವರ್ಷಗಳು ತುಂಬಿದಾಗ ಅವರಿಗೆ ಆನ್‍ಕ್ಯೂಬಾ ಎಂಬ ಗೌರವ ನೀಡಲಾಗಿತ್ತು. ಕ್ಯೂಬಾ ದೀಪ ಸಹ ಶತಾಯುಷಿಗಳಿಂದ ಪ್ರಸಿದ್ಧಿಯಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಮಂಡಳಿ ಪ್ರಕಾರ ದ್ವೀಪರಾಷ್ಟ್ರವು 2,150 ಶತಾಯುಷಿಗಳನ್ನು ಹೊಂದಿದ್ದು, ಇವರಲ್ಲಿ ಮರಿಯಾ ಅತ್ಯಂತ ಹಿರಿಯರು.

Facebook Comments

Sri Raghav

Admin