2030-31ರ ವೇಳೆಗೆ 300 ಮೆಟ್ರಿಕ್ ಟನ್ ಉಕ್ಕು ಉತ್ಪಾದನೆ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

Central-Minster-Bhirendra-S
ಬೆಂಗಳೂರು, ಜೂ.29(ಪಿಐಬಿ) -ಭಾರತವು ಉಕ್ಕು ಉತ್ಪಾದನೆಯಲ್ಲಿ ಜಾಗತಿಕ ಮಾನ್ಯತೆ ಗಳಿಸುತ್ತಿದ್ದು, 2030-31ರ ವೇಳೆಗೆ ಉಕ್ಕು ಉತ್ಪಾದನೆ ಸಾಮಥ್ರ್ಯವನ್ನು 300 ಮೆಟ್ರಿಕ್ ಟನ್‍ಗಳಿಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಕೇಂದ್ರ ಉಕ್ಕು ಖಾತೆ ಸಚಿವ ಚೌಧರಿ ಬೀರೇಂದ್ರಸಿಂಗ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ರಾಷ್ಟ್ರೀಯ ಉಕ್ಕು ಬಳಕೆದಾರರ ಮಂಡಳಿಯ ಸಭೆಯಲ್ಲಿ ಮಾತನಾಡಿದ ಸಚಿವರು, ಭಾರತವು ಪ್ರಸ್ತುತ ಉಕ್ಕು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು 12 ವರ್ಷಗಳಲ್ಲಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

Facebook Comments