ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 29-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಸುವರ್ಣಮೃಗದ ಇರುವಿಕೆ ಅಸಂಭವ. ಆದರೂ ಶ್ರೀರಾಮನು ಅಂಥ ಮೃಗಕ್ಕಾಗಿ ಆಶಿಸಿದನು.ಸಾಮಾನ್ಯವಾಗಿ ಯಾರಿಗೆ ವಿಪತ್ತು ಸಮೀಪಿಸಿದೆಯೋ ಅವರ ಬುದ್ದಿ ವ್ಯಾಮೋಹಗೊಳ್ಳುತ್ತದೆ. -ಮಹಾಭಾರತ

Rashi

ಪಂಚಾಂಗ : 29.06.2018 ಶುಕ್ರವಾರ

ಸೂರ್ಯ ಉದಯ ಬೆ.05.57 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.7.48 / ಚಂದ್ರ ಅಸ್ತ ಬೆ.6.41
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ :ಪ್ರತಿಪತ್ (ಮ.12.48)
ನಕ್ಷತ್ರ: ಪೂರ್ವಾಷಾಢ (ಮ.3.21) / ಯೋಗ: ಇಂದ್ರ (ರಾ.3.34)
ಕರಣ: ಕೌಲವ-ತೈತಿಲ (ಮ.12-48-ರಾ.2.04)
ಮಳೆ ನಕ್ಷತ್ರ: ಆರಿದ್ರಾ / ಮಾಸ: ಮಿಥುನ / ತೇದಿ: 15

ಇಂದಿನ ವಿಶೇಷ:

ರಾಶಿ ಭವಿಷ್ಯ : 

ಮೇಷ: ಸ್ನೇಹಿತರೊಂದಿಗೆ ಹಳೆಯ ನೆನಪುಗಳ ಮೆಲುಕು ಹಾಕಲಿದ್ದೀರಿ.
ವೃಷಭ: ವೃಥಾ ಅನುಮಾನದಿಂದ ಸಂಸಾರದಲ್ಲಿ ಕಲಹ ಉಂಟಾಗಲಿದೆ.
ಮಿಥುನ: ಸ್ನೇಹಿತರು, ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ಕಟಕ: ದಾರ್ಶನಿಕರೊಬ್ಬರ ದರ್ಶನ ಭೇಟಿ ಮಾಡಲಿದ್ದೀರಿ.
ಸಿಂಹ: ದುಡುಕಿನ ಮಾತಿನ ಬಗ್ಗೆ ಪಶ್ಚಾತ್ತಾಪ ಪಡಲಿದ್ದೀರಿ
ಕನ್ಯಾ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಉಪಟಳ.
ತುಲಾ: ವ್ಯವಹಾರದಲ್ಲಿ ಹಣ ಹೂಡಿಕೆ ಬಗ್ಗೆ ಎಚ್ಚರದಿಂದಿರಿ.
ವೃಶ್ಚಿಕ: ಮಡದಿಯಿಂದ ಕಿರಿಕಿರಿ.
ಧನುರ್: ಮನೆಯವರಿಂದ ನಿಂದನೆ ಎದುರಾಗಲಿದೆ .
ಮಕರ: ಸೋದರನಿಂದ ಧನ ಸಹಾಯ ಪಡೆಯಲಿದ್ದೀರಿ.
ಕುಂಭ: ಶುಭ ಸುದ್ದಿ ಕೇಳಲಿದ್ದೀರಿ.
ಮೀನ: ಪ್ರಯೋಜನಕ್ಕೆ ಬಾರದ ಸ್ನೇಹಿತರಿಂದ ಸುಳ್ಳು ಆರೋಪ ಕೇಳಲಿದ್ದೀರಿ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin