ಲೀಗ್ ಹಂತದ ಕೊನೆ ಹಣಾಹಣಿಯಲ್ಲಿ ಪನಾಮ ವಿರುದ್ಧ ಟ್ಯುನೀಷ್ಯಾಗೆ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Panama--01

ಸರಾಂಸ್ಕ್, ಜೂ.29- ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಜಿ ಗ್ರೂಪ್‍ನ ಲೀಗ್ ಹಂತದ ಕೊನೆ ಹಣಾಹಣಿಯಲ್ಲಿ ಟ್ಯುನೀಷ್ಯಾ, ಪನಾಮ ತಂಡವನ್ನು 2-1 ಗೋಲಿನಿಂದ ಮಣಿಸಿ ಮುಂದಿನ ಹಂತ ಪ್ರವೇಶಿಸಿದೆ. 40 ವರ್ಷಗಳ ಇತಿಹಾಸದಲ್ಲಿ ಪುಟ್ಟ ರಾಷ್ಟ್ರ ಟ್ಯುನೀಷ್ಯಾ ಇದೇ ಮೊದಲ ಬಾರಿ ವಿಶ್ವಕಪ್ ಫುಟ್ಬಾಲ್ ಪಂದ್ಯವೊಂದರಲ್ಲಿ ಜಯಿಸಿದಂತಾಗಿದೆ.

ನಿನ್ನೆ ತಡರಾತ್ರಿ ಸರಾಂಸ್ಕ್‍ನ ಮಾರ್ಡೋವಿಯಾ ಕ್ರೀಡಾಂಗಣದಲ್ಲಿ ನಡೆದ ಕುತೂಹಲಕಾರಿ ಪಂದ್ಯದಲ್ಲಿ ಎರಡು ತಂಡಗಳು ತೀವ್ರ ಹೋರಾಟ ನಡೆಸಿದವು. ಪ್ರಥಮ ಮುಖಾಮುಖಿಯಲ್ಲೇ, ಆಕ್ರಮಣಕಾರಿ ತಂತ್ರದೊಂದಿಗೆ ಕಣಕ್ಕಿಳಿದ ಪನಾಮಾಗೆ ಟ್ಯುನೀಷ್ಯಾದಿಂದ ಸ್ವಯಂಗೋಲಿನ ಕೊಡುಗೆ ಲಭಿಸಿತು.
ಪಂದ್ಯದ 33ನೇ ನಿಮಿಷದಲ್ಲಿ ಜೋಸ್ ಲೂಯಿಸ್ ರೋಡ್ರಿಗಸ್ ಒದೆತದಲ್ಲಿ ಚೆಂಡು ಟ್ಯುನೀಷ್ಯಾ ಯಸ್ಸಿನ್ ಮರಿಹ್‍ಗೆ ಬಡಿದು ಗೋಲುಪಟ್ಟಿಗೆ ಸೇರಿತು. 9ನೇ ನಿಮಿಷದಲ್ಲಿ ಎದುರಾಳಿ ತಂಡದ ಸ್ವಯಂ ಗೋಲಿನ ಕಾಣಿಕೆಯಿಂದ ಪನಾಮಗೆ ಒಂದು ನಿರಾಯಾಸ ಗೋಲು ಲಭಿಸಿತು. ಇದರೊಂದಿಗೆ ಪನಾಮ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮುನ್ನಡೆ ಸಾಧಿಸಿತ್ತು.

ಆದರೆ, ಉತ್ತರಾರ್ಧದಲ್ಲಿ ಪನಾಮ ಭಾರೀ ಹಿನ್ನಡೆ ಅನುಭವಿಸಿತು. 51ನೇ ನಿಮಿಷದಲ್ಲಿ ಪನಾಮದ ರಕ್ಷಣಾ ಗೋಡೆ ಭೇದಿಸಿದ ಬೆನ್ ಯೂಸುಫ್ ಟ್ಯುನೀಷ್ಯಾಗೆ ಮೊದಲ ಗೋಲಿನ ಉಡುಗೊರೆ ನೀಡಿದರು. ನಂತರ ಆಕ್ರಮಣಕಾರಿ ಆಟ ಮುಂದುವರಿಸಿದ ತಂಡವು 66ನೇ ನಿಮಿಷದಲ್ಲಿ ವಹಾಬ್ ಖಾಜ್ರಿ ನೆರವಿನಿಂದ ಎರಡನೇ ಗೋಲು ಸಂಪಾದಿಸಿತು. ಇದರೊಂದಿಗೆ ಟ್ಯುನೀಷ್ಯಾ 2-1 ಗೋಲುಗಳಿಂದ ಜಯ ಸಾಧಿಸಿ ಮುಂದಿನ ಹಂತ ಪ್ರವೇಶಿಸಿದೆ.

Facebook Comments

Sri Raghav

Admin