ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾತ್ರೆ ಬೇಡ, ಈ ಆಹಾರಗಳು ಸಾಕು

ಈ ಸುದ್ದಿಯನ್ನು ಶೇರ್ ಮಾಡಿ

Me-Sex--01

ಸೆಕ್ಸ್ ಜೀವನ ನಿರಾಸೆ ತಂದಿದೆಯೇ ? ಹಾಗಾದರೆ ಅದರ ಹಿಂದೆ ಹಲವಾರು ಕಾರಣಗಳಿರಬಹುದು. ಆ ನಿರಾಸೆಗೆ ನೀವು ಖುದ್ದು ಕಾರಣಕರ್ತರಾಗಿರಬಹುದು. ನಿರಾಸೆಗೆ ಪ್ರಮುಖ ಕಾರಣಗಳಲ್ಲಿ ಮುಖ್ಯವಾದುದು ನೀವು ಸೇವಿಸುವ ಆಹಾರವೂ ಒಂದಾಗಿರಬಹುದು. ನಿಮ್ಮ ಸೆಕ್ಸ್ ಜೀವನವನ್ನು  ನ್ನಾಗಿಟ್ಟುಕೊಳ್ಳಬೇಕೆಂದರೆ ನಿಮ್ಮ ನೀವು ಸೇವಿಸುವ ಆಹಾರದ ಮೇಲೆ ಇತಿ ಮಿತಿಗಳಿರಬೇಕು, ಆಹಾರ ಉತ್ತಮವಾಗಿರಬೇಕು. ಯಾರು ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಂಡಿರುತ್ತಾರೋ ಅವರು ಸೆಕ್ಸ್ ನಲ್ಲಿ ಉತ್ತಮ ಆಸಕ್ತಿ ಮತ್ತು ಅನುಭವವನ್ನು ಪಡೆಯುತ್ತಾರೆ. ಮುಖ್ಯವಾಗಿ ಮಿತವಾದ ಆಹಾರ ಸೆಕ್ಸ್ ಲೈಫ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಲೈಂಗಿಕ ಸಾಮರ್ಥ್ಯವು ನೇರವಾಗಿ ನಾವು ಸೇವಿಸುವ ಆಹಾರ ಪದಾರ್ಥದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಿರುತ್ತಾರೆ. ನಾವು ತಿನ್ನುವ ಆಹಾರವು ನಮ್ಮ ವರ್ತನೆಯನ್ನು ನಿರ್ಧರಿಸುತ್ತದೆ ಎಂದು ಆಯುರ್ವೇದದಲ್ಲಿಯೇ ಉಲ್ಲೇಖಗೊಂಡಿದ್ದು, ಆಧುನಿಕ ವೈದ್ಯ ಪದ್ಧತಿಯು ಸಹ ಇದನ್ನು ಅನುಮೋದಿಸುತ್ತದೆ. ಆಧುನಿಕ ಜೀವನ ಶೈಲಿಯು ಪುರುಷರ ಲೈಂಗಿಕತೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮವನ್ನು ಬೀರುತ್ತಿರುವುದನ್ನು ಪ್ರತಿಯೊಬ್ಬರೂ ಗಮನಿಸಬಹುದು. ನಿಮಿರುವಿಕೆಯ ದೋಷ ಹಾಗು ಶೀಘ್ರ ವೀರ್ಯ ಸ್ಖಲನವು ಪುರುಷರ ಲೈಂಗಿಕ ಸಾಮರ್ಥ್ಯದ ಮೇಲೆ
ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಇದಕ್ಕಾಗಿ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ವಯಾಗ್ರ ಹಾಗು ಅದೇ ರೀತಿಯ ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೂ ಈ ಔಷಧಿಗಳು ತತ್‌ಕ್ಷಣಕ್ಕೆ ನೆರವಾದರೂ ಸಹ ಮುಂದಿನ ಜೀವನದಲ್ಲಿ ಹಲವಾರು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ದೀರ್ಘಕಾಲದ ನಿಮಿರುವಿಕೆ ಸಮಸ್ಯೆಗಳು ಮತ್ತು ಇತರೆ ಅಡ್ಡಪರಿಣಾಮಗಳು ಈ ಔಷಧಿಗಳು ಉಂಟು ಮಾಡುತ್ತವೆ. ಆದರೆ ಈಗ ಈ ಔಷಧಿಗಳನ್ನು ನೀವು ಅವಲಂಬಿಸಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ಈ ಔಷಧಿಗಳು ಮಾಡುವ ಕೆಲಸವನ್ನು ಕೆಲವೊಂದು ಸ್ವಾಭಾವಿಕ ಆಹಾರ ಪದಾರ್ಥಗಳು ಮಾಡುತ್ತವೆ. ಈ ಆಹಾರ ಪದಾರ್ಥಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ, ವೀರ್ಯದ ಗುಣಮಟ್ಟಗಳನ್ನು ಹೆಚ್ಚಿಸುತ್ತವೆ, ನಿಮಿರುವಿಕೆಯ ದೋಷಗಳನ್ನು ಸರಿಪಡಿಸುತ್ತವೆ ಮತ್ತು  ಲೈಂಗಿಕ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ. ಈ ಆಹಾರ ಪದಾರ್ಥಗಳು ವಯಾಗ್ರಕ್ಕೆ ಬದಲಿಯಾಗಿ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.

ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳು :

ದಾಳಿಂಬೆ : ದಾಳಿಂಬೆಯು ತನ್ನಲ್ಲಿರುವ ಆಂಟಿಆಕ್ಸಿಡೆಂಟ್ ಕಾರಣವಾಗಿ ಶಿಶ್ನಕ್ಕೆ ರಕ್ತ ಸಂಚಾರವನ್ನು
ಹೆಚ್ಚಿಸುತ್ತದೆ. ದಾಳಿಂಬೆಯನ್ನು ಸೇವಿಸುವುದರಿಂದ ನಿಮಿರುವಿಕೆಯ ದೋಷವನ್ನು ಸರಿಪಡಿಸಿಕೊಳ್ಳಬಹುದು ಮತ್ತು ನಿಮ್ಮ
ಶಿಶ್ನವನ್ನು ಗಟ್ಟಿಗೊಳಿಸಬಹುದು. ದಾಳಿಂಬೆಯು ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಜೊತೆಗೆ ಇದು ಅನಿಮಿಯಾಗೂ ಸಹ ಒಳ್ಳೆಯದು.

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ
ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ
ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ಮೊಟ್ಟೆಗಳು : ಮೊಟ್ಟೆಗಳು ಸಹಾ ಪುರುಷರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೊಟ್ಟೆಗಳಲ್ಲಿ
ವಿಟಮಿನ್  ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನುಗಳು, ವಿಟಮಿನ್ನುಗಳು
ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತವೆ.

ಮೀನು : ಸಾಮಾನ್ಯವಾಗಿ ಎಲ್ಲಾ ಮೀನುಗಳಲ್ಲಿಯೂ ಒಮೆಗಾ 3 ಕೊಬ್ಬಿನ ಆಮ್ಲಗಳಿರುತ್ತವೆ. ಮೀನಿನ ಸೇವನೆ
ಹಾಗೂ ಮೀನೆಣ್ಣೆಯ ಗುಳಿಗೆಗಳನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ಲೈಂಗಿಕ ಆರೋಗ್ಯ ಉತ್ತಮವಾಗುತ್ತದೆ.

ಕಪ್ಪು ಚಾಕಲೇಟು : ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ನೆಚ್ಚಿನ ಚಾಕಲೇಟು
ಸಹಾ ಒಂದು ಇದರಲ್ಲಿರುವ ಥಿಯೋಬ್ರೋಮೈನ್ ಎಂಬ ಪೋಷಕಾಂಶ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತದೆ.
ಹೆಚ್ಚಾಗಿ ಕಪ್ಪು ಚಾಕಲೇಟು ಸೇವನೆಯಿಂದ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು.

ಕಾಫಿ : ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ
ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ
ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು
ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.

ಶುಂಠಿ : ಈ ಮಸಾಲೆ ಪದಾರ್ಥವು ನಿಮ್ಮ ಲೈಂಗಿಕ ಜೀವನವನ್ನು ಗಣನೀಯವಾಗಿ ಸುಧಾರಿಸುತ್ತದೆ.
ಅದರಲ್ಲಿಯೂ ಇದು ನಿಮಿರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಶುಂಠಿಯು ಶಿಶ್ನಕ್ಕೆ ರಕ್ತ ಸಂಚಾರವನ್ನು
ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ದೋಷವನ್ನು ಸರಿಪಡಿಸುತ್ತದೆ.
ಒಂದು ಟೀಸ್ಪೂನ್ ಶುಂಠಿಯನ್ನು ಪ್ರತಿದಿನ ಕೆಲವು ವಾರಗಳವರೆಗೆ ಸೇವಿಸಿ. ಇದರಿಂದ ಟೆಸ್ಟೋಸ್ಟಿರೋನ್ ಮಟ್ಟಗಳು
ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಬಿಸಿ ಹಾಲು :  ಹಾಲು ತಾಜಾ ಹಾಗೂ ಕೊಬ್ಬು ಸಹಿತ
ಆಹಾರಗಳಾಡ ಹಾಲು, ಕ್ರೀಂ, ಬೆಣ್ಣೆ ಮೊದಲಾದವು ಲೈಂಗಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುತ್ತವೆ. ರಾತ್ರಿ
ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನ ಸೇವನೆ ಈ ನಿಟ್ಟಿನಲ್ಲಿ ಅದ್ಭುತಗಳನ್ನೇ ಸಾಧಿಸುತ್ತದೆ.

Facebook Comments

Sri Raghav

Admin