ನಬಾರ್ಡ್‍ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Nabard

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ (ನಬಾರ್ಡ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 21
ಹುದ್ದೆಗಳ ವಿವರ
1.ಮುಖ್ಯ ತಾಂತ್ರಿಕಾಧಿಕಾರಿ -01
2.ಗ್ರಾಮೀಣ ಸಾಲ ಸಂಸ್ಥೆಗಳ ಗಣಕೀಕರಣದ ಹಿರಿಯ ಸಲಹೆಗಾರ – 01
3.ಚೀಪ್ ರಿಸ್ಕ್ ಮ್ಯಾನೇಜರ್ – 01
4.ಪ್ರಾಜೆಕ್ಟ್ ಮ್ಯಾನೇಜರ್ (ಗಣಕೀಕರಣ) – 03
5.ಅಸಿಸ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್ (ಮಾರ್ಕೆಟಿಂಗ್) – 01
6.ಅಸಿಸ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್ (ಕ್ಲೈಮೆಟ್ ಚೇಂಜ್) – 01
7.ಅಸಿಸ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್ (ರಿನೀವಬಲ್ ಎನರ್ಜಿ) – 01
8.ಅಸಿಸ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್ (ಎಂ.ಎಸ್.ಐ ಅಂಡ್ ರಿಪೋರ್ಟ) – 01
9.ರಿಸ್ಕ್ ಮ್ಯಾನೇಜರ್ – 06
10.ಸಿನಿಯರ್ ಪ್ರಾಜೆಕ್ಟ್ ಫೈನಾನ್ಸ್ ಮ್ಯಾನೇಜರ್ – 01
11.ಪ್ರಾಜೆಕ್ಟ್ ಫೈನಾನ್ಸ್ ಮ್ಯಾನೇಜರ್ – 01
12.ವಿಶೇಷ ಅಧಿಕಾರಿ – 01
13.ಕಮ್ಯೂನಿಕೇಷನ್ ಪ್ರೊಪೇಷನಲ್ಸ್ – 02
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಬಿಇ/ಬಿಟೆಕ್, ಕ್ರ.ಸಂ 2ರ ಹುದ್ದೆಗೆ ಐಟಿ ವಿಷಯದಲ್ಲಿ ಪದವಿ, ಕ್ರ.ಸಂ 3ರ ಹುದ್ದೆಗೆ ಮ್ಯಾನೇಜ್’ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 4ರ ಹುದ್ದೆಗೆ ಮ್ಯಾನೇಜ್’ಮೆಂಟ್ ವಿಷಯದಲ್ಲಿ ಪದವಿ, ಕ್ರ.ಸಂ 5ರ ಹುದ್ದೆಗೆ ಪುಡ್ ಟೆಕ್ನಾಲಜಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ಪದವಿ, ಕ್ರ.ಸಂ 6ರ ಹುದ್ದೆಗೆ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 7ರ ಹುದ್ದೆಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್, ಕ್ರ.ಸಂ 8ರ ಹುದ್ದೆಗೆ ಕಂಪ್ಯೂಟರ್ ಸೈನ್ ವಿಷಯದಲ್ಲಿ ಬಿ.ಟೆಕ್, ಬಿಎಸ್ಸಿ (ಕಂಪ್ಯೂಟರ್) ಅಥವಾ ಎಂಸಿಎ, ಕ್ರ.ಸಂ 9ರ ಹುದ್ದೆಗೆ ಎಂಬಿಎ ಅಥವಾ ಫೈನಾನ್ಸ್, ಸ್ಟ್ಯಾಟಿಸ್ಟಿಕ್ಸ್, ಎಕಾನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 10 ಮತ್ತು 11ರ ಹುದ್ದೆಗೆ ಸಿಎ/ಎಂಬಿಎ (ಫೈನಾನ್ಸ್), ಬಿ.ಟೆಕ್/ಬಿಇ ಜೊತೆಗೆ ಎಂಬಿಎ, ಕ್ರ.ಸಂ 12ರ ಹುದ್ದೆಗೆ ಬಿಎ.ಎಲ್’ಎಲ್’ಬಿ/ಎಲ್’ಎಲ್,ಎಂ, ಕ್ರ.ಸಂ 13ರ ಹುದ್ದೆಗೆ ಕಲಾ/ಸಮೂಹ ಸಂವಹನದಲ್ಲಿ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : ಗರಿಷ್ಠ ವಯೋಮಿತಿಯನ್ನು 63 ವರ್ಷಕ್ಕೆ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗದವರಿಗೆ 500 ರೂ, ಹಿಂದುಳಿದ ವರ್ಗ, ಪ.ಜಾ, ಪ.ಪಂ ದವರಿಗೆ 50 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-07-2018

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  https://www.nabard.org   ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin