ಸಮನ್ವಯ ಸಮಿತಿ ಸಭೆ ಮುನ್ನ ಸಿದ್ದರಾಮಯ್ಯರ ಆರೋಗ್ಯದ ಕುರಿತು ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

 

Siddaramaiah--01

ಬೆಂಗಳೂರು. ಜು.01 : ರಾಜ್ಯ ಸಮ್ಮಿಶ್ರ ಸರ್ಕಾರದ ಎರಡನೇ ಸಮನ್ವಯ ಸಮಿತಿ ಸಭೆ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಜೆಡಿಎಸ್ ನ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನೀಶ್ ಆಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

ಸಮನ್ವಯ ಸಭೆಗೂ ಮುನ್ನ ನಾಯಕರುಗಳು ಸಿದ್ದರಾಮಯ್ಯನವರ ಆರೋಗ್ಯದ ಬಗ್ಗೆ ಮಾತುಕತೆ ನಡೆಸಿದರು. ಸಭೆ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರ ಆರೋಗ್ಯವನ್ನು ಸಿಎಂ,ಡ್ಯಾನಿಶ್ ಆಲಿ ಮತ್ತು ವೇಣುಗೋಪಾಲ್ ವಿಚಾರಿಸಿದರು. ಶಾಂತಿವನದಿಂದ ಮರಳಿದ ಬಳಿಕ ಬಳಿಕ ತುಂಬಾ ಎನರ್ಜಿ ಬಂದಿದೆ ಎಂದ ವೇಣುಗೋಪಾಲ್ ಹೇಳಿದಾಗ ಎನರ್ಜಿ ಜೊತೆಗೆ ಹ್ಯಾಂಡ್ಸಮ್ ಆಗಿದ್ದಾರೆ ಎಂದು ತಮಾಷೆ ಮಾತುಗಳನ್ನು ಡ್ಯಾನಿಷ್ ಅಲಿ ಆಡಿದರು.

ಮಾತು ಮುಂದುವರಿಸಿದ ಆಲಿ ವಯಸ್ಸಿಗಿಂತ 10 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ ಎಂದಾಗ ಸಿದ್ದರಾಮಯ್ಯತ್ ಮುಗುಳ್ನಕ್ಕರು. ಎರಡೂವರೆ ಕೆ.ಜಿ ಕಡಿಮೆ ಆಗಿರುವುದಾಗಿ ಸಿದ್ದರಾಮಯ್ಯ ಹೇಳಿದರು. ಅಲ್ಲಿನ ಆಹಾರ ಪದ್ಧತಿ ಮಾತ್ರ ಕಟ್ಟುನಿಟ್ಟು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಹೌದೌದು… ಅಲ್ಲಿ ಊಟ ತಿಂಡೀದೇ ಫಜೀತಿ ಎಂದು ತಮ್ಮ ಅನುಭ ಹಂಚಿಕೊಂಡರು.

 

Facebook Comments

Sri Raghav

Admin