ಮಾಣಿಗನಹಳ್ಳಿ ಗ್ರಾಮದಲ್ಲಿ ವಿವಾಹಿತ ಮಹಿಳೆ ಮೇಲೆ ಮೂವರಿಂದ ಗ್ಯಾಂಗ್ ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ನೆಲಮಂಗಲ, ಜು.1- ಮನೆಯ ಬಾಗಿಲು ಒಡೆದು ಒಳ ನುಗ್ಗಿದ ಮೂವರು ವಿಕೃತ ಕಾಮಿಗಳು ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುದೂರು ಹೋಬಳಿ ಮಾಣಿಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು, ಅಸ್ವಸ್ಥಗೊಂಡಿರುವ ಈಕೆಯನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದ ನರೇಂದ್ರ ಎಂಬುವರ ಪತ್ನಿ ಮೇಲೆ ರಾತ್ರಿ ಅದೇ ಗ್ರಾಮದ ಕರಡಿ (25), ಮಂಜುನಾಥ (27) ಮತ್ತು ಪುರುಷೋತ್ತಮ್ (32) ಎಂಬುವರು ಅತ್ಯಾಚಾರ ನಡೆಸಿ ಇದೀಗ ತಲೆ ಮರೆಸಿಕೊಂಡಿದ್ದಾರೆ.  ನರೇಂದ್ರ ಲಾರಿ ಚಾಲಕ ವೃತ್ತಿ ಮಾಡುತ್ತಿದ್ದು, ಎರಡು ತಿಂಗಳಿನಿಂದ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾರೆ. ಮನೆಯಲ್ಲಿ ಪತ್ನಿ ಹಾಗೂ 8 ವರ್ಷದ ಮಗ ಮಾತ್ರ ಇದ್ದರು. ಇದನ್ನು ಅರಿತ ಈ ಮೂವರು ವಿಕೃತ ಕಾಮಿಗಳು ರಾತ್ರಿ 10.30ರ ಸಮಯದಲ್ಲಿ ಇವರ ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ.

ಈ ವೇಳೆ ಮಹಿಳೆ ಕಿಟಕಿ ತೆಗೆದು ಯಾರೆಂದು ವಿಚಾರಿಸಿದಾಗ ನಿಮ್ಮ ಜತೆ ಮಾತನಾಡಬೇಕು ಎಂದು ಹೇಳಿದ್ದಾರೆ. ಬೆಳಗ್ಗೆ ಬನ್ನಿ ಎಂದು ಹೇಳಿ ಕಿಟಕಿ ಹಾಕಿದಾಗ ಈ ಮೂವರು ಬಾಗಿಲು ಬಡಿದಿದ್ದಾರೆ. ಮಹಿಳೆ ಬಾಗಿಲು ತೆಗೆಯದಿದ್ದಾಗ ಬಲವಂತವಾಗಿ ಬಾಗಿಲು ಒಡೆದು ಒಳನುಗ್ಗಿ ಕಿರುಚಾಡದಂತೆ ಆಕೆಯನ್ನು ಬೆದರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಬೆಳಗಿನ ಜಾವ ಪರಾರಿಯಾಗಿದ್ದಾರೆ.  ಈ ಬಗ್ಗೆ ಕುದೂರು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಮಹಿಳೆಯನ್ನು ರಾಜರಾಜೇಶ್ವರಿನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸ್ಥಳೀಯರಿಂದ ಮಾಹಿತಿ ಪಡೆದು ಪರಾರಿಯಾಗಿರುವ ಮೂವರಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Facebook Comments

Sri Raghav

Admin