ವರದಕ್ಷಿಣೆಗಾಗಿ ಪತ್ನಿಗೆ ಮದ್ಯ ಕುಡಿಸಿ, ನಗ್ನ ಫೋಟೊ ತೆಗೆದು ಬ್ಲಾಕ್ ಮೇಲ್ ಮಾಡಿದ ವಿಕೃತ ಗಂಡ

ಈ ಸುದ್ದಿಯನ್ನು ಶೇರ್ ಮಾಡಿ

Wife-Photo--01

ಬೆಂಗಳೂರು,ಜು.1- ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿ ಮದ್ಯ ಕುಡಿಸಿ ನಗ್ನ ಫೋಟೊ ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ವಿಕೃತ ಗಂಡನ ವಿರುದ್ದ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ವರ್ಷದ ಹಿಂದೆ ಕವಿತಾ(ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಮದುವೆಯಾಗಿದ್ದ ಕೃಷ್ಣಮೂರ್ತಿ ಎಂಬಾತ ಕಾವೇರಿನಗರದಲ್ಲಿ ವಾಸವಾಗಿದ್ದು , ಮೊದ ಮೊದಲು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ.

ತದನಂತರ ಪತ್ನಿಗೆ ತವರಿನಿಂದ ಅರ್ಧ ಕೆ.ಜಿ ಚಿನ್ನ ಹಾಗೂ 10 ಲಕ್ಷ ತರುವಂತೆ ಕುಟುಂಬದವರೊಂದಿಗೆ ಸೇರಿಕೊಂಡು ಕೃಷ್ಣಮೂರ್ತಿ ಹಿಂಸಿಸುತ್ತಿದ್ದನು. ಅಲ್ಲದೆ ಮನೆಯಲ್ಲಿ ಪಾರ್ಟಿ ನಡೆದ ಸಂದರ್ಭದಲ್ಲಿ ಕಿರುಕುಳ ನೀಡಿದ್ದನು. ಇತ್ತೀಚೆಗೆ ಬಲವಂತವಾಗಿ ಪತ್ನಿಗೆ ಮದ್ಯ ಕುಡಿಸಿ ನಗ್ನ ಫೋಟೊ ತೆಗೆದು ನೀನು ಹಣ, ಚಿನ್ನದ ತರದಿದ್ದರೆ ಫೋಟೊಗಳನ್ನು ಯೂಟೂಬ್‍ಗೆ ಹಾಕುವುದಾಗಿ ಬೆದರಿಕೆ ಹಾಕಿದ್ದನು. ಅಲ್ಲದೆ ಮಾವ ಹಾಗೂ ನಾದಿನಿಯಿಂದಲೂ ಕಿರುಕುಳ ಉಂಟಾಗುತ್ತಿತ್ತು. ಪತಿಯ ನಡವಳಿಕೆಯಿಂದ ನೊಂದ ಪತ್ನಿ ಗಿರಿನಗರ ಠಾಣೆಗೆ ದೂರು ನೀಡಿದ್ದಾಳೆ.

Facebook Comments

Sri Raghav

Admin