2018ರ ಕಬಡ್ಡಿ ಮಾಸ್ಟರ್ಸ್ ಚಾಂಪಿಯನ್ ಆದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Kabaddi--01

ದುಬೈ. ಜು.01 : ದುಬೈನಲ್ಲಿ ನಡೆದ 2018ರ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಭಾರತ ಇರಾನ್ ವಿರುದ್ಧ 44-26 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾವನ್ನು 36-20 ಅಂಕಗಳಿಂದ ಮಣಿಸಿದ್ದ ಭಾರತ ಫೈನಲ್ ಪ್ರವೇಶಿಸಿತ್ತು. ಅಜಯ್ ಠಾಕೂರ್ 9 ರೇಡ್ ಪಾಯಿಂಟ್ ಗಳಿಸಿದರು. ಭಾರತ ಓಟದಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಪಂದ್ಯ ಆರಂಭಿಸಿತ್ತು.

ಅಜಯ್ ಠಾಕೂರ್ 9 ಅಂಕ ಮತ್ತು ಮೋನು 6 ಅಂಕ ಗಳಿಸಿ ತಂಡಕ್ಕೆ ಗೆಲುವನ್ನ ದಕ್ಕಿಸಿಕೊಟ್ಟರು. ಅತ್ಯುದ್ಭುತ ಡಿಫೆಂಡರ್ ಆಟವಾಡಿದ ಸುರ್ಜಿತ್ ಸಿಂಗ್ ಟ್ಯಾಕಲ್ನಲ್ಲಿ 7 ಅಂಕಗಳನ್ನ ಭಾರತಕ್ಕೆ ತಂದುಕೊಟ್ಟರು. ಭಾರತ ಮತ್ತು ಇರಾನ್ ನಡುವಿನ ಕಬಡ್ಡಿ ಪಂದ್ಯ ಹಲವು ರೋಚಕ ಕ್ಷಣಗಳಿಗೂ ಸಾಕ್ಷಿಯಾಯ್ತು. ಎರಡು ಬಾರಿ ಇರಾನ್ ಆಟಗಾರರನ್ನ ಭಾರತದ ಆಟಗಾರರು ಆಲ್‌ಔಟ್ ಮಾಡಿ ಚಾಂಪಿಯನ್ನರ ಘನತೆಯ ಆಟವಾಡಿದರು. ಪಂದ್ಯದ ಪ್ರಥಮಾರ್ಧದಲ್ಲಿ 10 ನಿಮಿಷಗಳ ಕಾಲ ವಿದ್ಯುತ್ ಅಡಚಣೆಯುಂಟಾಯಿತು. ಹಾಗಿದ್ದರು ಭಾರತಕ್ಕೆ ಗೆಲುವಿನ ಉಡುಗೊರೆ ಸಿಕ್ಕಿದೆ. ಉಭಯ ತಂಡಗಳು ಅಹ್ಮದಾಬಾದ್‌ನಲ್ಲಿ ನಡೆದ 2016ರ ವಿಶ್ವಕಪ್‌ನಲ್ಲಿ ಸೆಣಸಾಡಿದ್ದವು. ಆಗ ಠಾಕೂರ್ ಸಾಹಸದಿಂದ ಭಾರತ 9 ಅಂಕದಿಂದ ರೋಚಕ ಜಯ ಸಾಧಿಸಿತ್ತು.

Facebook Comments

Sri Raghav

Admin