ಆರೋಗ್ಯದಿಂದಿರಲು ಇವುಗಳಿಂದ ದೂರವಿರಿ

ಈ ಸುದ್ದಿಯನ್ನು ಶೇರ್ ಮಾಡಿ

Healthy-Life
ಪ್ರತಿ ಜೀವಿಯು ಆರೋಗ್ಯದಿಂದ ಇರಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಮುಖ್ಯವಾಗಿ ಮನುಷ್ಯ ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆರೋಗ್ಯಯುಕ್ತ ಜೀವನಕ್ಕೆ ಕ್ರಮಬದ್ಧ ಆಹಾರ, ನಿರಂತರ ದೇಹ ದಂಡನೆ ಅತ್ಯವಶ್ಯಕ. ಇವುಗಳನ್ನು ಪಾಲಿಸಲಾಗದವರು ಕಡ್ಡಾಯವಾಗಿ ಕನಿಷ್ಟಪಕ್ಷ ಈ ಕೆಳಗಿನವುಗಳಿಂದ ದೂರವಿದ್ದರೆ ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.

Healthy-Life-2

ಆಲ್ಕೋಹಾಲ್: ಆಲ್ಕೋಹಾಲ್ ಸೇವನೆ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುವ ಬಿ-ಕ್ಯಾರೋಟಿನ್ ಬಳಸಿ ಕೊಳ್ಳುವ ಸಾಮಥ್ರ್ಯಕ್ಕೆ ತಡೆಯುಂಟು ಮಾಡುತ್ತದೆ. ಹೀಗಾಗಿ ವಿಪರೀತ ಮದ್ಯಪಾನಿಗಳು ಬಾಯಿ, ಕಂಠನಾಳ ಮತ್ತು ಲಿವರ್ ಕ್ಯಾನ್ಸರ್‍ಗೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತದೆ. ಆಲ್ಕೋಹಾಲ್ ಪೊಲೇಟ್, ಥಿಯಾಮೈನ್, ವಿಟಮಿನ್-ಬಿ ಮತ್ತು ಸೆಲೆನಿಯಮ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಬೇಕು.

Healthy-Life-5

ಧೂಮಪಾನ: ಕ್ಯಾನ್ಸರ್‍ನಲ್ಲಿ ಅತ್ಯಂತ ಗಂಡಾಂತರದ ಅಂಶವೆಂದರೆ ಧೂಮಪಾನ. ಇದರಿಂದ ಶ್ವಾಸಕೋಶ, ಬಾಯಿ, ಅನ್ನನಾಳ ಮತ್ತು ಸ್ತನ ಕ್ಯಾನ್ಸರ್‍ಗಳಿಗೆ ಕಾರಣವಾಗುತ್ತದೆ. ವಿಟಮಿನ್-ಸಿ ಮತ್ತು ಬಿ-ಕಾಂಪ್ಲೆಕ್ಸ್ ಪ್ರಭಾವವನ್ನು ಇದು ಕಡಿಮೆ ಮಾಡುತ್ತದೆ. ಈ ಎಲ್ಲ ಕಾರಣಗಳಿಂದ ಅಪಾಯಕಾರಿ ಧೂಮಪಾನವನ್ನು ತಕ್ಷಣ ತ್ಯಜಿಸಬೇಕು.

Healthy-Life-4

ಫಾಸ್ಟ್‍ಫುಡ್‍ಗಳು: ಹೊಗೆಯಾಡುವ, ಅತಿಯಾದ ಉಪ್ಪು ಮಿಶ್ರಿತ, ಕರಿದ, ಹುರಿದ, ಕೆಂಡದ ಮೇಲೆ ಸುಟ್ಟ ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳನ್ನು ವಿಪರೀತ ಸೇವಿಸುವ ಮಂದಿಯಲ್ಲಿ ಉದರ ಮತ್ತು ಅನ್ನನಾಳ ಕ್ಯಾನ್ಸರ್ ಗೆಡ್ಡೆಗಳು ಕಂಡುಬರುತ್ತದೆ. ಇಂಥ ಆಹಾರ ಪದಾರ್ಥಗಳು ಕಾರ್ಸಿನೋಜೆನ್ ಎಂದು ಕರೆಯಲಾಗುವ ಪಾಲಿ ಆರೋಮ್ಯಾಟಿಕ್ ಹೈಡ್ರೋಕಾರ್ಬನ್‍ಅನ್ನು ಒಳಗೊಂಡಿರುತ್ತದೆ. ಉಪ್ಪಿನ ಕಾಯಿಯಲ್ಲಿರುವ ಉಪ್ಪು ಹೊಟ್ಟೆಯನ್ನು ಹಾನಿಗೊಳಿಸಿ ಗೆಡ್ಡೆಗಳು ರೂಪುಗೊಳ್ಳಲು ಕಾರಣವಾಗುತ್ತದೆ.

Healthy-Life-3

Facebook Comments

Sri Raghav

Admin