ಭದ್ರತೆ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾದ ಮೈಸೂರು ಅರಮನೆ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Palace

ಮೈಸೂರು, ಜು.1- ಭದ್ರತೆ ವಿಚಾರದಲ್ಲಿ ಮೈಸೂರು ಅರಮನೆ ಮತ್ತೊಮ್ಮೆ ಸುದ್ದಿಯಾಗಿದೆ. ಅರಮನೆಯ ಭದ್ರತಾ ಎಸಿಪಿ ಅವರ ಕುರ್ಚಿಯಲ್ಲಿ ಕೇರಳದ ಸ್ವಾಮೀಜಿಯೊಬ್ಬರು ಕುಳಿತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈಸೂರು ಅರಮನೆಯಲ್ಲಿ ಅಕ್ರಮಗಳು ನಡೆಯುತ್ತಿದ್ದು, ಭದ್ರತಾ ಲೋಪವಾಗಿದೆ ಎಂದು ಅರಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಕಾನ್‍ಸ್ಟೆಬಲ್ ಚಿಕ್ಕಣ್ಣ ಆರೋಪಿಸಿದ್ದರು.

ಅರಮನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಸಹಿಸಲಾಗದೆ ಅದನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರಿಂದ ತಮಗೆ ಜೀವ ಭಯವಿದ್ದು, ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದರಿಂದ ತಾವು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಚಿಕ್ಕಣ್ಣ ತಿಳಿಸಿದ್ದಾರೆ. ಕೇರಳದ ಸ್ವಾಮೀಜಿ ಸುನಿಲ್‍ದಾಸ್ ಎಂಬುವವರು ಮೈಸೂರು ಅರಮನೆಯ ಎಸಿಪಿ ಅವರ ಕಚೇರಿಯಲ್ಲಿರುವ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿರುವ ದೃಶ್ಯ ವೈರಲ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Facebook Comments

Sri Raghav

Admin