ಪತ್ನಿಯ ಮರ್ಮಾಂಗಕ್ಕೆ ಕಾರದ ಪುಡಿ ಎರಚಿ, ವಿಷ ಕುಡಿಸಿ ಕೊಲೆಗೆ ಯತ್ನಿಸಿದ ಪೊಲೀಸಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

 

ಹಾಸನ,ಜು.1- ಕಷ್ಟದಲ್ಲಿರುವವರಿಗೆ ಪೊಲೀಸರು ನೆರವಾಗುತ್ತಾರೆ ಎಂಬುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಾನ್‍ಸ್ಟೇಬಲ್ ತನ್ನಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿಬಲವಂತವಾಗಿ ವಿಷ ಕುಡಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಹಾಕಿ ಅಮಾನವೀಯವಾಗಿ ಹಿಂಸಿಸಿರುವ ಘಟನೆ ಅರಕಲಗೂಡು ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಕೊಣನೂರು ಠಾಣೆ ಕಾನ್‍ಸ್ಟೇಬಲ್ ಅರುಣ್ ಎಂಬಾತನೆ ಪತ್ನಿ ರೂಪಾ ಅವರಿಗೆ ಬಲವಂತವಾಗಿ ವಿಷ ಕುಡಿಸಿದ ಪತಿರಾಯ.

Police-Wofe--01

ಅರಕಲಗೂಡು ತಾಲ್ಲೂಕಿನ ಮಸತ್ತೂರಿನಲ್ಲಿ ಈ ಘಟನೆ ನಡೆದಿದ್ದು , ಸಾವು ಬದುಕಿನ ಬಗ್ಗೆ ನರಳಾಡುತ್ತಿದ್ದ ರೂಪಾಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಕಾನ್‍ಸ್ಟೇಬಲ್, ರೂಪಾ ಕುಟುಂಬದವರಿಗೂ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಪ್ರತಿನಿತ್ಯ ಒಂದಿಲ್ಲೊಂದು ಕಾರಣದಿಂದ ಪತ್ನಿ ಜೊತೆ ಜಗಳವಾಡುತ್ತಿದ್ದನಲ್ಲದೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿದ್ದನು ಎನ್ನಲಾಗಿದೆ. ಈ ಬಗ್ಗೆ ಅರಕಲಗೂಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin