ಉದ್ಯಮಿ ಕನ್ನಯ್ಯ ಲಾಲ್ ಶೂಟೌಟ್ ಪ್ರಕರಣದಲ್ಲಿ ಇಬ್ಬರು ಶಾರ್ಪ್‌ಶೂಟರ್’ಗಳು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Kanayya-Lal--01
ಬೆಂಗಳೂರು,ಜು.1- ಸಿಲಿಕಾನ್ ಸಿಟಿಯಲ್ಲಿ ಉದ್ಯಮಿ ಕನ್ನಯ್ಯ ಲಾಲ್ ಎಂಬುವರ ಮೇಲೆ ಶೂಟೌಟ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣೆ ಪೋಲೀಸರು ಇಬ್ಬರು ಶಾರ್ಪ್‍ಶೂಟರ್‍ಗಳನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ವಿಭೂತಿ ಕುಮಾರ್ ಸಿಂಗ್(58) ಮತ್ತು ಸುರಾಜ್ ಬಾನುಸಿಂಗ್(26) ಬಂಧಿತ ಆರೋಪಿಗಳು.
ಘಟನೆ ವಿವರ:
ಬೆಂಗಳೂರಿನಲ್ಲಿದ್ದುಕೊಂಡೇ ಕನ್ನಯ್ಯ ಲಾಲ್ ಬಿಹಾರದಲ್ಲಿ ಮುಸುಕಿನ ಜೋಳದ ವ್ಯವಹಾರ ಹಾಗೂ ಪಾಪ್‍ಕಾರ್ನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕನ್ನಯ್ಯ ಲಾಲ್ ಕಚೇರಿಗೆ ಬಂದಿದ್ದ ಬಿಹಾರದ ಬಹುದೊಡ್ಡ ಉದ್ಯಮಿ ರಾಜೇಂದ್ರ ಅಗರವಾಲ್ ವ್ಯವಹಾರ ಸಂಬಂಧ ಮಾತುಕತೆ ನಡೆಸಿದ್ದರು.

ಅತ್ಯಂತ ಲಾಭದಾಯಕವಾಗಿದ್ದ ಪಾಪ್‍ಕಾರ್ನ್ ವ್ಯವಹಾರವನ್ನು ತನಗೆ ಬಿಟ್ಟುಕೊಡುವಂತೆ ಕನ್ನಯ್ಯ ಅವರನ್ನು ರಾಜೇಂದ್ರ ಅಗರವಾಲ್ ಕೇಳಿದ್ದರು. ಆದರೆ ಕನ್ನಯ್ಯ ಲಾಲ್ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಸಿಟ್ಟುಗೆದ್ದಿದ್ದ ರಾಜೇಂದ್ರ ಅಗರ್‍ವಾಲ್ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದರು.
ಬಿಹಾರದ ಶಾರ್ಪ್‍ಶೂಟರ್ ವಿಭೂತಿಸಿಂಗ್‍ಗೆ 30 ಲಕ್ಷಕ್ಕೆ ಕನ್ನಯ್ಯ ಲಾಲ್ ಹತ್ಯೆ ಮಾಡಲು ಸುಫಾರಿ ನೀಡಲಾಗಿತ್ತು. ಮೂವರು ಶೂಟರ್‍ಗಳೊಂದಿಗೆ ಬೆಂಗಳೂರಿಗೆ ಬಂದಿದ್ದ ಆರೋಪಿ ವಿಭೂತಿಸಿಂಗ್ ಜೂ.2ರಂದು ಕೋರಮಂಗಲದ ಆರ್ಕೇಡ್‍ನಲ್ಲಿನ ಜನರನ್ನು ನೋಡಿ ಭಯಭೀತರಾಗಿದ್ದ ಶೂಟರ್ಸ್ ಕನ್ನಯ್ಯ ಲಾಲ್ ಮೇಲೆ ಮಿಸ್‍ಫೈರ್ ಮಾಡಿ ಪರಾರಿಯಾಗಿದ್ದರು.

ಘಟನೆಯಲ್ಲಿ ಕನ್ನಯ್ಯ ಲಾಲ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಕೋರಮಂಗಲ ಠಾಣೆ ಪೋಲೀಸರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಆರ್ಕೇಡ್ ಸುತ್ತಮುತ್ತಲಿನ ಸಿಸಿಟಿವಿಗಳ ಪುಟೇಜ್‍ಗಳನ್ನು ಪರಿಶೀಲಿಸಿ ಅದರಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರು ಶಾರ್ಟ್‍ಶೂಟರ್‍ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಫಾರಿ ನೀಡಿದ್ದ ಉದ್ಯಮಿ ರಾಜೇಂದ್ರ ಅಗರವಾಲ್ ಹಾಗೂ ಮತ್ತೊಬ್ಬ ಶಾರ್ಪ್‍ಶೂಟರ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Facebook Comments

Sri Raghav

Admin