ಜು.10 ರೊಳಗೆ ಕಾವೇರಿ ಜಲಾನಯನ ಭಾಗದ ಮುಖಂಡರ ಸಭೆ : ಡಿ.ಕೆ.ಶಿ

ಈ ಸುದ್ದಿಯನ್ನು ಶೇರ್ ಮಾಡಿ

D-K-Shivakumar

ಬೆಂಗಳೂರು, ಜು.2-ಜುಲೈ 10 ರೊಳಗೆ ಕಾವೇರಿ ಜಲಾನಯನ ಭಾಗದ ಮುಖಂಡರ ಸಭೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯನ ಭಾಗದ ಸಚಿವರು, ಶಾಸಕರ ಜೊತೆ ಜು.6 ರಿಂದ 10ರೊಳಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಇಂದು ಕಾವೇರಿ ಪ್ರಾಧಿಕಾರದ ಸಭೆ ನಡೆದಿದ್ದು, ರಾಜ್ಯದ ಪರವಾದ ವಾದವನ್ನು ಮಂಡಿಸಲಾಗಿದೆ. ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಜು.5 ರಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಯಲಿದೆ ಎಂದರು.

ನಮ್ಮ ರೈತರ ಅನುಕೂಲ ನೋಡಿಕೊಂಡು ಅವರ ಹಿತಾಸಕ್ತಿಗೆ ಧಕ್ಕೆಯಾಗದಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ರಾಜ್ಯಕ್ಕೆ ಸಿಗಬೇಕಿರುವ ನ್ಯಾಯದ ಬಗ್ಗೆ ಇಂದಿನ ಸಭೆಯಲ್ಲಿ ನಮ್ಮ ವಾದವನ್ನು ಮಂಡಿಸಲಾಗಿದೆ ಎಂದ ಅವರು, ಕಾವೇರಿ ಜಲಾನಯನ ಭಾಗದ ರೈತರ ಬೇಡಿಕೆಗೆ ತಕ್ಕಂತೆ ನೀರು ಬಿಡುಗಡೆ ವಿಚಾರ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿವೆ ಎಂದರು.

Facebook Comments

Sri Raghav

Admin