ಹು-ಧಾ ತ್ವರಿತ ಸಮೂಹ ಸಾರಿಗೆ ನಿರ್ವಹಣೆ ಬಿಆರ್‌ಟಿಸಿ ಕಂಪನಿ ಹೆಗಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

NWKRTC
ಬೆಂಗಳೂರು, ಜು.2- ಹುಬ್ಬಳ್ಳಿ-ಧಾರವಾಡ ತ್ವರಿತ ಸಮೂಹ ಸಾರಿಗೆ ನಿರ್ವಹಿಸುವ ಜವಾಬ್ದಾರಿಯನ್ನು ಬಿ.ಆರ್.ಟಿ.ಸಿ ಕಂಪೆನಿಗೆ ವಹಿಸಲು ನಿರ್ಧರಿಸಿರುವ ವಾಯುವ್ಯ ಸಾರಿಗೆ ನಿಗಮದ ಕ್ರಮ ಸೂಕ್ತವಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಬಿಆರ್‍ಟಿಎಸ್ ಕಂಪೆನಿಗೆ ವಾಹನಗಳನ್ನು ನಡೆಸಿ ನಿರ್ವಹಿಸಿ ಅನುಭವವಿಲ್ಲ. ಅಲ್ಲದೆ ಅನುಭವವಿಲ್ಲದ ಸಂಸ್ಥೆ ಉತ್ತಮ ಸೇವೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಉತ್ತಮ ಸೇವೆಯ ದೃಷ್ಟಿಯಿಂದ ಆ ಕಂಪೆನಿಗೆ ನಿರ್ವಹಣೆ ವಹಿಸಿದೆ. ಕೆಎಸ್‍ಆರ್‍ಟಿಸಿ ಅಂಗ ಸಂಸ್ಥೆಯಾದ ಎನ್‍ಡಬ್ಲ್ಯೂಕೆಆರ್‍ಟಿಸಿಗೆ ವಹಿಸುವಂತೆ ಸೂಚಿಸುವಂತೆ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತಸುಬ್ಬರಾವ್ ಸಲಹೆ ನೀಡಿದ್ದಾರೆ.

ತ್ವರಿತ ಸಾಮೂಹಿಕ ಸಾರಿಗೆಯಲ್ಲಿ ಹೆಚ್ಚಿನ ವಾಹನಗಳು ವೋಲ್ವೋ ಆಗಿದೆ. ಇವುಗಳಿಗೆ ಇತರೆ ಬಸ್‍ಗಳಿಗಿಂತ ಹೆಚ್ಚಿನ ಡೀಸೆಲ್ ಅಗತ್ಯವಿರುತ್ತಿದೆ. ವೆಚ್ಚವೂ ಜಾಸ್ತಿಯಾಗುತ್ತದೆ. ಅಲ್ಲದೆ ಖಾಸಿಗಿಯವರು ಲಾಭವಿಲ್ಲದೆ ವಾಹನ ನಡೆಸುವುದಿಲ್ಲವಾದ್ದರಿಂದ ಪ್ರಯಾಣಿಕರ ಮೇಲೆಯೂ ಹೊರೆಯಾಗುತ್ತದೆ. ಹಾಗಾಗಿ ತ್ವರಿತ ಸಾಮೂಹಿಕ ಸಾರಿಗೆಯನ್ನು ವಾಯುವ್ಯ ನಿಗಮವೇ ನಡೆಸುವ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.

Facebook Comments

Sri Raghav

Admin