ಅದೃಷ್ಟದಾಟದಲ್ಲಿ ಕ್ರುವೇಷಿಯಾ ಕ್ವಾರ್ಟರ್ ಫೈನಲ್‍ಗೆ

ಈ ಸುದ್ದಿಯನ್ನು ಶೇರ್ ಮಾಡಿ

Cruveshia

ನಿಜ್ಜಿ ನೊವ್ಗೊರೊಡ್ (ಎಎನ್‍ಐ), ಜು.2- ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಸಮ ಬಲ ಸಾಧಿಸಿದರೂ ನಂತರ ನಡೆದ ಅದೃಷ್ಟದ ಹೋರಾಟದಲ್ಲಿ ಕ್ರುವೇಷಿಯಾ ಜಯಭೇರಿ ಬಾರಿಸಿದೆ. 1998ರ ನಂತರ ಮೊದಲ ಬಾರಿಗೆ ಕ್ರುವೇಷಿಯಾ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ಪ್ರಬಲ ಹೋರಾಟ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಡೆನ್ಮಾರ್ಕ್ ನಿರಾಸೆಯಿಂದ ಟೂರ್ನಿಯಿಂದ ಹೊರ ಬಿದ್ದಿದೆ. 90 ನಿಮಿಷಗಳ ಪಂದ್ಯದಲ್ಲಿ ಡೆನ್ಮಾರ್ಕ್ ಹಾಗೂ ಕ್ರುವೇಷ್ಯಾ ಆಕ್ರಮಣಕಾರಿ ಆಟವನ್ನೇ ಪ್ರದರ್ಶಿಸಿತು.

ಗೋಲು ಗಳಿಸಲು ಡೆನ್ಮಾರ್ಕ್‍ನ ಮುಂಚೂಣಿ ಆಟಗಾರ ಜೋರ್ಗಿನ್ಸನ್ ಸೋಚ್ನಿ ಹಲವಾರು ಬಾರಿ ಪ್ರಯತ್ನಿಸಿದರೂ ಡೆನ್ಮಾರ್ಕ್‍ನ ಡಿಫೆನ್ಸ್‍ನ ತಡೆಗೋಡೆಯನ್ನು ದಾಟಲು ಸಾಧ್ಯವಾಗಲಿಲ್ಲ. ನಿಗದಿತ ಸಮಯದಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ದಾಖಲಿಸಿ ಸಮ ಬಲ ಸಾಧಿಸಲು ಯಶಸ್ವಿಯಾಯಿತು. ನಂತರ 20 ನಿಮಿಷಗಳ ಕಾಲ ಎಕ್ಸ್‍ಟ್ರಾ ಟೈಮ್‍ನಲ್ಲೂ ಕೂಡ ಯಾವುದೇ ನಿರ್ಣಾಯಕ ಫಲಿತಾಂಶ ಬರದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್‍ಗೆ ತೀರ್ಪುಗಾರರು ಮುಂದಾದರು.

ಇಲ್ಲೇ ಒಲಿದಿದ್ದು ಅದೃಷ್ಟ: ಕ್ರೀಡಾಂಗಣದಲ್ಲಿ ನೆರೆದಿದ್ದ ಸಹಸ್ರಾರು ಫುಟ್ಬಾಲ್ ಪ್ರೇಮಿಗಳು ಹಾಗೂ ವಿಶ್ವದಲ್ಲೇ ಕ್ರೀಡಾ ಪ್ರೇಮಿಗಳನ್ನು ಕುತೂಹಲ ಕ್ಷಣ ಬಂದಾಗ ಡೆನ್ಮಾರ್ಕ್ ಹಾಗೂ ಕ್ರುವೆಷಿಯಾ ಆಟಗಾರರಲ್ಲಿ ಒತ್ತಡದ ಅನುಭವ ಕಂಡು ಬಂತು. ಗೋಲ್ ಕೀಪರ್‍ಗಳೇ ಹೀರೋಗಳಾಗಿ ಮಿಂಚುವ ಸುವರ್ಣಾವಕಾಶ ಒದಗಿ ಬಂತು. ಆದರೆ ಇದರಲ್ಲಿ ಅದೃಷ್ಟ ಕೈ ಕೊಟ್ಟಿದ್ದು ಮಾತ್ರ ಡೆನ್ಮಾರ್ಕ್‍ಗೆ.

ಕ್ರುವೇಷ್ಯಾದ ಗೋಲ್ ಕೀಪರ್ ಡ್ಯಾನಿಜಿಲ್ ಚಮತ್ಕಾರಿ ರಕ್ಷಣೆಯಿಂದಾಗಿ ಕ್ರುವೇಷಿಯಾ  3-2 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿತು.
ಡೆನ್ಮಾರ್ಕ್‍ನ ಸ್ಟಾರ್ ಆಟಗಾರ ಲೂಕಾ ಮೊರ್ಡಿಕ್ ಅವರು ಸುಲಭದ ಅವಕಾಶವನ್ನು ಕೈ ಚೆಲ್ಲಿದ  ಪರಿಣಾಮ ತಂಡ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿತ್ತು. ತಂಡ ಗೆಲುವು ಸಾಧಿಸುತ್ತಿದ್ದಂತೆ ಕ್ರುವೇಷಿಯಾದ ಆಟಗಾರರು ಸಂಭ್ರಮದ ಹೊಳೆಯನ್ನೇ ಹರಿಸಿದರು.

ಈಗಾಗಲೇ ಪ್ರಮುಖ ತಂಡಗಳಾದ  ಅರ್ಜೆಂಟೀನಾ , ಸ್ಪೇನ್, ಪೋರ್ಚುಗಲ್‍ನಂತಹ ತಂಡಗಳು ಡೋರ್‍ನಿಂದ ಹೊರ ಬಿದ್ದಿರುವುದರಿಂದ ಇಂದು ನಡೆಯುವ ಬ್ರೆಜಿಲ್ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ. ಇದರ ನಡುವೆ ಅಂತಿಮ 8 ತಂಡಗಳು  ಕ್ವಾರ್ಟರ್ ಫೈನಲ್ ತಲುಪುತ್ತಿರುವುದರಿಂದ ಫುಟ್ಬಾಲ್ ಕ್ರೀಡಾ ಪ್ರೇಮಿಗಳ ನಾಡಿ ಬಡಿತವು ಕೂಡ ಹೆಚ್ಚಾಗಿದೆ.

Facebook Comments

Sri Raghav

Admin