ಸುಗಮ ಹೆರಿಗೆಗೆ ಸಹಾಯವಾಗಲಿವೆ ಕೆಲವು ಯೋಗಾಸನಗಳು

ಈ ಸುದ್ದಿಯನ್ನು ಶೇರ್ ಮಾಡಿ

Yoga--01
ಗರ್ಭಧಾರಣೆಯು ಮಹಿಳೆಯ ಬದುಕಿನಲ್ಲಿ ಅತ್ಯಂತ ಅದ್ಭುತ ಅನುಭವಗಳಲ್ಲಿ ಒಂದು. ಸುಲಭ ಹೆರಿಗೆಗಾಗಿ ಯೋಗ ಅತ್ಯಂತ ಪರಿಣಾಮಕಾರಿ ವಿಧಾನ ಎಂಬುದನ್ನು ವೈದ್ಯರು ಮತ್ತು ಪ್ರಸೂತಿ ತಜ್ಞರು ಗುರುತಿಸಿದ್ದಾರೆ. ದೇಹ, ಮನಸ್ಸು ಮತ್ತು ಚೈತನ್ಯವನ್ನು ಸಂಪರ್ಕಿಸುವ ಮೂಲಕ ಯೋಗವು ಗರ್ಭಿಣಿಯರಿಗೆ ಸುಲಭ ಹೆರಿಗೆಯಾಗಲು ಸಹಾಯ ಮಾಡುತ್ತದೆ. ಇದರಿಂದ ಗರ್ಭಧಾರಣೆ ವೇಳೆ ಮಹಿಳೆಯರಿಗೆ ಆರಾಮ, ವಿಶ್ರಾಂತಿ ಮತ್ತು ಆರೋಗ್ಯಕ್ಕೆ ನೆರವಾಗುತ್ತದೆ. ಗರ್ಭಧಾರಣೆ ವೇಳೆ ಶಿಫಾರಸು ಮಾಡಿದ ಯೋಗಾಸನ ಮಾಡುವುದರಿಂದ ಭ್ರೂಣದಲ್ಲಿರುವ ಶಿಶುವಿನ ಆರೋಗ್ಯಕರ ಬೆಳವಣಿಗೆ ಮತ್ತು ಹೆಚ್ಚು ಹೆರಿಗೆ ನೋವಿಲ್ಲದೆ ಸರಾಗವಾಗಿ ಪ್ರಸವವಾಗುತ್ತದೆ.

ಗರ್ಭಧಾರಣೆ ವೇಳೆ ಮಾಡುವ ಯೋಗದಿಂದ ಅನೇಕ ಪ್ರಯೋಜನಗಳಿವೆ. ಭೌತಿಕ ಮಟ್ಟದ ಮೇಲೆ ನಿರ್ದಿಷ್ಟವಾಗಿ ಅನುಸರಿಸುವ ಯೋಗ ಭಂಗಿಗಳು ದೇಹದ ಸಾಮಥ್ರ್ಯ ಹೆಚ್ಚಿಸಿ ಹೊಂದಾಣಿಕೆ ಸಾಮಥ್ರ್ಯವನ್ನು ಸೃಷ್ಟಿಸುತ್ತದೆ. ಯೋಗಾಸನಗಳು ಚೈತನ್ಯ ವೃದ್ಧಿಸಿ ಒತ್ತಡ ಕಡಿಮೆ ಮಾಡುತ್ತದೆ. ಗರ್ಭಧಾರಣೆ ವೇಳೆ ಕಂಡುಬರುವ ಬೆನ್ನು ನೋವು ಮತ್ತು ದ್ರವ ಉಳಿಯುವಿಕೆಯಂಥ ಸಾಮಾನ್ಯ ಗರ್ಭಧಾರಣೆ ದೋಷಗಳಿಗೆ ಉಪಶಮನ ನೀಡಲು ನೆರವಾಗುತ್ತದೆ.

ಉಸಿರಾಟ ವ್ಯಾಯಾಮಗಳು ನರಮಂಡಲದ ವ್ಯವಸ್ಥೆಯನ್ನು ಉತ್ತಮಗೊಳಿಸಿ ದೇಹ ಮತ್ತು ಹೊಟ್ಟೆಯಲ್ಲಿರುವ ಶಿಶುವಿಗೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ. ಪ್ರಸವ ವೇಳೆಯಲ್ಲಂತೂ ಇದು ತುಂಬಾ ಪ್ರಯೋಜನಕಾರಿ. ಹೆರಿಗೆ ಸುಗಮವಾಗಿ ಆಗಲು ಸಾಯ್ನುಗಳು ವಿಕಸನವಾಗಲು ಸಹಾಯ ಮಾಡುತ್ತದೆ. ಯೋಗಾಸನ ಚಲನೆಗಳು ಮತ್ತು ಆಸನ-ಭಂಗಿಗಳು ಹೆರಿಗೆಯ ಪ್ರತಿ ಹಂತದಲ್ಲೂ ಗರ್ಭಿಣಿಯರಿಗೆ ಸಹಕಾರಿ. ಮೊದಲ ಮೂರು ತಿಂಗಳ ಅವಧಿಯಲ್ಲಿ ಯೋಗಾಸನ ಮಾಡುವಾಗ ಎಚ್ಚರ ವಹಿಸಬೇಕು.

Facebook Comments

Sri Raghav

Admin