ಟಿ-20ಪಂದ್ಯದಲ್ಲಿ 173 ರನ್‍ ಬಾರಿಸಿ ಆರೋನ್ ಫಿಂಚ್ ವಿಶ್ವದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

Aaron-Finch

ಹಾರರೆ, ಜು.3- ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರನ್ ಸುರಿಮಳೆಯನ್ನೇ ಸುರಿಸಿದ್ದ ಆಸೀಸ್‍ನ ನಾಯಕ ಆರೋನ್ ಫಿಂಚ್ ಟಿ-20 ಚುಟುಕು ಕ್ರಿಕೆಟ್‍ನಲ್ಲಿ 173 ರನ್‍ಗಳನ್ನು ಬಾರಿಸುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ. ನಾಯಕನ ಜವಾಬ್ದಾರಿಯ ನಡುವೆ 173 ರನ್‍ಗಳನ್ನು ದಾಖಲಿಸಿರುವುದು ಕೂಡ ದಾಖಲೆಯ ಪುಟವನ್ನು ಸೇರಿದೆ.  ಜಿಂಬಾಬ್ವೆ ವಿರುದ್ಧ ಟಾಸ್ ಸೋತರೂ ಕೂಡ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡದ ಪರ ಆರಂಭಿಕ ದಾಂಡಿಗರಾಗಿ ಕ್ರೀಸ್‍ಗಿಳಿದ ಫಿಂಚ್ ರೋಚಕ ಆಟವನ್ನು ಪ್ರದರ್ಶಿಸಿ ತಾನು ಎದುರಿಸಿದ 76 ಎಸೆತಗಳಲ್ಲಿ 16 ಬೌಂಡರಿ ಹಾಗೂ 10 ಸಿಕ್ಸರ್‍ಗಳ ಸಹಿತ 172 ಗಳಿಸುವ ಮೂಲಕ ಈ ದಾಖಲೆಗೆ ಭಾಜನರಾಗಿದ್ದಾರೆ.  ಚುಟುಕು ಕ್ರಿಕೆಟ್‍ನಲ್ಲಿ ಕೆರಿಬಿಯನ್‍ನ ದೈತ್ಯ ಕ್ರಿಸ್‍ಗೇಲ್ 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಸರಣಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಗಳಿಸಿದ 175 ಗರಿಷ್ಠ ಮೊತ್ತವಾಗಿದ್ದರೂ ಕೂಡ ಆರೋನ್ ಫಿಂಚ್ ಗಳಿಸಿರುವ 173 ರನ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಆಗಿ ಬಿಂಬಿಸಿಕೊಂಡಿದೆ.

Facebook Comments

Sri Raghav

Admin