ಬಿಯರ್ ಕುಡಿಯೋರಿಗೆ ಈ ವಿಷಯ ನಿಜಕ್ಕೂ ಶಾಕ್ ನೀಡುತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Bear--01

ನೊರೆ ತುಂಬಿದ ತಂಪಾದ ಬಿಯರ್ ಸೇವಿಸುವುದೆಂದರೆ ಬಲು ಮಜಾ. ಆದರೆ, ನೀವು ಬಿಯರ್ ಪ್ರಿಯರಾದರೆ ಇಲ್ಲಿ ನಿಮಗೊಂದು ಕಹಿ ಸುದ್ದಿ. ಜೊತೆಗೆ ಇಲ್ಲಿ ಚಿಂತಿಸಬೇಕಾದ ಗಂಭೀರ ಸಂಗತಿಗಳಿವೆ.  ಲಘು ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆಯು ಹೃದ್ರೋಗ ಮತ್ತು ಪಾಶ್ರ್ವವಾಯುವಿನ ಸಂಭವಾಂಶಗಳನ್ನು ಕಡಿಮೆ ಮಾಡಲು ನಿಮಗೆ ನೆರವಾಗಬಹುದು. ಆದರೆ, ನೀವು ಮಜವಾಗಿ ಸೇವಿಸುವ ಬಿಯರ್ ಈ ಗಂಡಾಂತರಗಳಿಗೆ ಎಡೆ ಮಾಡಿಕೊಡುತ್ತದೆ. ಅಂಥ ಅಪಾಯಕಾರಿ ವಸ್ತುಗಳು ಬಿಯರ್‍ನಲ್ಲಿ ಅಡಗಿರುತ್ತವೆ. ಈ ತಂಪಾದ ಬಿಯರ್ ನೀವು ಊಹಿಸಲು ಸಾಧ್ಯವಾಗದಂತೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಹಾನಿಯುಂಟು ಮಾಡುತ್ತದೆ. ಹಾಗಾಗಿ ಬಿಯರ್‍ನಿಂದ ಆಗುವ ಪ್ರಯೋಜನಗಳನ್ನು ಬದಿಗಿಟ್ಟು ಈ ಮಾರಕ ದುಷ್ಪರಿಣಾಮಗಳ ಬಗ್ಗೆ ಗಂಭೀರವಾಗಿ ಆಲೋಚಿಸಿ.  ಇಂದಿನ ಮೋಜಿನ ಜೀವನದಲ್ಲಿ ಯುವಕರಾದಿಯಾಗಿ ಬಹುತೇಕ ಮಂದಿ ಬಿಯರ್ ಹೀರುವುದು ಸರ್ವ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಬಿಯರ್‍ನಲ್ಲಿ ಐದು ಪ್ರಾಣ ಘಾತುಕ ಅಂಶಗಳಿವೆ. ಅದರಿಂದ ದೂರವಿರುವುದು ಈ ಗಂಡಾಂತರದಿಂದ ಪಾರಾಗಲು ಇರುವ ಸುಲಭ ಮಾರ್ಗವಾಗಿದೆ.

# ಕ್ಯಾರಮೆಲ್ ಕಲರಿಂಗ್:
ಕ್ಯಾರಮೆಲ್ ಅಂದರೆ ಮದ್ಯಸಾರಕ್ಕೆ ಬಣ್ಣ ಹಾಕುವುದಕ್ಕೆ ಉಪಯೋಗಿಸುವ ಸುಟ್ಟ ಸಕ್ಕರೆ ; ಒಂದು ಬಗೆಯ ಮಿಠಾಯಿ. ನ್ಯೂ ಕಾಸೆಲ್‍ನಂಥ ಕಂದು ವರ್ಣದ ಘಟಕವು ಮೃದು ಸ್ವಾದ ಮತ್ತು ಆಕರ್ಷಕ ಬಣ್ಣವನ್ನು ಹೊಂದಿರುತ್ತದೆ. ವಿಷಕಾರಿ ವಸ್ತುಗಳಿಂದ ಬರಬಹುದಾದ ಇದು ತುಂಬಾ ಅಪಾಯಕಾರಿ. 4-ಮೆಲ್‍ನಂಥ ಕೃತಕ ಕ್ಯಾರಮೆಲ್ ವರ್ಣಗಳು ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳ ಬಿಯರ್ ಲೆಬಲ್‍ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಬಿಯರ್‍ನಲ್ಲಿ ಇರುವ ಈ ಘಾತುಕ ಘಟಕದ ಬಗ್ಗೆ ಗಮನಕ್ಕೇ ಬರುವುದಿಲ್ಲ. ನಿಮ್ಮ ಆಯ್ಕೆಯ ಬಿಯರ್‍ನಲ್ಲಿ 4-ಮೆಲ್ ಇಲ್ಲದಿದ್ದರೂ ಇತರ ಕ್ಯಾರಮೆಲ್ ಕಲರಿಂಗ್‍ಗಳು ಇನ್ನೊಂದು ಹಾನಿಕಾರಕ ರಾಸಾಯನಿಕ ಅಮೋನಿಯಾವನ್ನು ಒಳಗೊಂಡಿರುತ್ತದೆ. ಇದು ಕೂಡ ಕ್ಯಾನ್ಸರ್‍ಗೆ ಎಡೆ ಮಾಡಿಕೊಡುತ್ತದೆ. ಲೇಬಲ್‍ಗಳ ಮೇಲೆ ಇದು ಕಂಡು ಬರದಿರುವ ಕಾರಣ ಅದನ್ನು ಸೇವಿಸುತ್ತಿರುವುದು ನಿಮ್ಮ ಗಮನಕ್ಕೆ ಬರುವುದಿಲ್ಲ.

# ಹೈ ಫ್ರುಕ್ಟೋಸ್ ಕಾರ್ನ್ ಸಿರಪ್ (ಎಚ್‍ಎಫ್‍ಸಿಎಸ್):
ಹೈ ಫ್ರುಕ್ಟೋಸ್ ಕಾರ್ನ್ ಸಿರಪ್-ಎಚ್‍ಎಫ್‍ಸಿಎಸ್ ಇತರ ಸ್ವೀಟ್ನರ್‍ಗಳಿಗಿಂತ ತ್ವರಿತವಾಗಿ ಕೊಬ್ಬು ಶೇಖರಣೆಗೊಳ್ಳುವಂತೆ ಚಯಾಪಚಯ ಕ್ರಿಯೆಗೆ ಕಾರಣವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಗ್ಲುಕೋಸ್‍ಗಿಂತ ಶೇ.200ರಷ್ಟು ಪ್ರಮಾಣದಲ್ಲಿ ಟ್ರೈಗ್ಲಿಸರೈಡ್ ಮಟ್ಟಗಳನ್ನು ಅಧಿಕಗೊಳಿಸುತ್ತದೆ. ಅನೇಕ ವರ್ಷಗಳ ಕಾಲ ಇದನ್ನು ಬಳಸಿ, ಇನ್ನು ಮುಂದೆ ಉಪಯೋಗಿಸುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಯಾವುದೇ ಲೇಬಲ್‍ಗಳ ಮೇಲೂ ಇದು ನಿಮಗೆ ಕಂಡುಬರುವುದಿಲ್ಲ. ಇನ್ನು ವಿಶೇಷವಾಗಿ ತುಂಬಾ ಸಿಹಿ ಇರುವ ಇತರ ಸ್ಟೌಟ್‍ಗಳು ಮತ್ತು ಡಾರ್ಕರ್ ಬಿಯರ್‍ಗಳಲ್ಲೂ ಇದನ್ನು ಹೇರಳವಾಗಿ ಬಳಸಲಾಗುತ್ತದೆ.

#ಮೊನೊಸೋಡಿಯಂ ಗ್ಲುಟಮೇಟ್ (ಎಂಎಸ್‍ಜಿ):
ಇದು ಎಷ್ಟು ಅಪಾಯಕಾರಿ ಮತ್ತು ಇದನ್ನು ತಪ್ಪಿಸಲು ಎಷ್ಟು ಕಷ್ಟ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಸಂಸ್ಕರಿತ ಆಹಾರದಲ್ಲಿ ಸ್ವಾದವನ್ನು ಹೆಚ್ಚಿಸಲು ಈ ವಿಷಯುತ್ತ ರಾಸಾಯನಿಕವನ್ನು ಬಳಸಲಾಗುತ್ತದೆ. ಇದು ಕೇವಲ ಬಿಯರ್ ಮತ್ತು ಇತರ ಪೇಯಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ಇದು ಬಾರ್ಲಿ ಮಾಲ್ಟ್, ಮಾಲ್ಟೆಡ್ ಬಾರ್ಲಿ, ಮಾಲ್ಟ್ ಎಕ್ಸ್‍ಟ್ರಾಕ್ಡ್ ಹಾಗೂ ಬ್ರೂವರ್ಸ್ ಯೀಸ್ಟ್‍ನಲ್ಲಿದ್ದು, ಸಂಸ್ಕರಣೆ ವೇಳೆ ಮೊನೊಸೋಡಿಯಂ ಗ್ಲುಟಮೇಟ್ (ಎಂಎಸ್‍ಜಿ) ಪರಿವರ್ತಿತವಾಗುತ್ತದೆ. ಬಾರ್ಲಿ ಮತ್ತು ಯೀಸ್ಟ್ ಇಲ್ಲದ ಯಾವುದೇ ಬಿಯರ್‍ಗಳಿಲ್ಲ. ಶೇ.100ರಷ್ಟು ಸಾವಯವ ಅಥವಾ ಮನೆಯಲ್ಲಿ ತಯಾರಿಸಿದ ಬಿಯರ್ ಆಗಿರದ ಹೊರತು ಉಳಿದೆಲ್ಲ ಬಿಯರ್‍ಗಳಲ್ಲಿ ಎಂಎಸ್‍ಜಿ ಹೇರಳವಾಗಿರುತ್ತದೆ.

# ಪ್ರೋಪಿಲಿನ್ ಗ್ಲೈಕೊಲ್:
ಈ ವಿವಾದಾತ್ಮಕ ಘಟಕಾಂಶವು ಅನೇಕ ಆಹಾರ ಉತ್ಪನ್ನಗಳಲ್ಲಿ ದ್ರಾವಕ ರೂಪದಲ್ಲಿ ಇರುತ್ತದೆ. ಫಾರ್ಮಸ್ಯೂಟಿಕಲ್ ಡ್ರಗ್‍ಗಳು, ಆಂಟಿಫ್ರೀಜ್, ಪೇಂಟ್‍ಗಳು ಮತ್ತು ವಾರ್ನಿಷ್‍ಗಳಲ್ಲಿ ಸಹ ಒಂದು ಘಟಕಾಂಶವಾಗಿ ಕಂಡು ಬರುತ್ತದೆ. ಬೃಹತ್ ಪ್ರಮಾಣದಲ್ಲಿ ಪ್ರೋಪಿಲಿನ್ ಗ್ಲೈಕೊಲ್‍ನನ್ನು ಸೇವಿಸಿದರೆ ಇದು ಕೋಶ ಪರಿವರ್ತನೆ ಸೇರಿದಂತೆ ಅನೇಕ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ಬಹು ಅಧ್ಯಯನಗಳು ತಿಳಿಸಿವೆ. ಯುರೋಪಿನ ಆಹಾರ ಉತ್ಪನ್ನಗಳಲ್ಲಿ ಈ ರಾಸಾಯನಿಕ ಕಂಡುಬರುವುದಿಲ್ಲ. ಯಾವುದೇ ಒಂದು ಬಿಯರ್‍ನಿಂದ ಒಂದು ಮೆಗಾ ಡೋಸ್‍ನನ್ನು ನೀವು ಪಡೆಯದೇ ಇದ್ದರೂ ನಿಯತ ಆಧಾರದ ಮೇಲೆ ವಿವಿಧ ಆಹಾರಗಳಿಂದ ಸ್ವಲ್ಪ ಮಾತ್ರ ಪಡೆದರೂ ಅದು ಹಾನಿಯನ್ನು ಹೆಚ್ಚಿಸುತ್ತದೆ.

# ಬಿಸ್ಫೆನೋಲ್-ಎ(ಬಿಪಿಎ):
ಇದು ಹಾರ್ಮೋನ್ ಕಾರ್ಯನಿರ್ವಹಣೆಗೆ ತಡೆಯೊಡ್ಡಿ ನಿಮ್ಮ ಎಂಡೋಕ್ರೈನ್ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕ್ಯಾನ್ಸರ್‍ಗೆ ಎಡೆ ಮಾಡಿಕೊಡುತ್ತದೆ. ಈ ರಾಸಾಯನಿಕದೊಂದಿಗೆ ಕಡಿಮೆ ಪ್ರಮಾಣದಲ್ಲಿ ಒಳಪಟ್ಟರೂ ಇದು ಮೈಗ್ರೇನ್ ಅಥವಾ ಅರೆ ತಲೆನೋವಿಗೆ ಕಾರಣವಾಗುತ್ತದೆ. ಬಿಪಿಎ ಕೇವಲ ಪ್ಲಾಸ್ಟಿಕ್‍ಗಳು ಮತ್ತು ಇತರ ಮಾರಾಟದ ವಸ್ತುಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ನಿಮ್ಮ ಬಿಯರ್ ಕ್ಯಾನ್‍ಗಳಲ್ಲೂ ಇದನ್ನು ನೋಡಬಹುದು. ಬಿಯರ್‍ನನ್ನು ಒಂದು ಕ್ಯಾನ್ ನಂತರ ಇನ್ನೊಂದು ಕ್ಯಾನ್‍ನಂತೆ ಸೇವಿಸುತ್ತಿದ್ದರೆ, ಪ್ರತಿ ಸಿಪ್‍ನಲ್ಲು ಸಣ್ಣ ಪ್ರಮಾಣದ ಬಿಪಿಎ ಸೇರುತ್ತಾ ಹೋಗುತ್ತದೆ. ಇದು ಯಾವುದೇ ತಕ್ಷಣದ ಅಪಾಯಗಳನ್ನು ತಂದೊಡ್ಡದಿದ್ದರೂ. ಇದು ಗಂಭೀರವಾದ, ಪ್ರಾಣಕ್ಕೆ ಸಂಚಕಾರ ಉಂಟು ಮಾಡುವ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಬೇಸಿಗೆ ಕಾಲದಲ್ಲಿ ಬಂಧು-ಮಿತ್ರ ರೊಂದಿಗೆ ಕೆಲವು ಬಿಯರ್‍ಗಳನ್ನು ಹೀರುವುದು ಹೆಚ್ಚು ಮೋಜು ಮಸ್ತಿ ನೀಡುತ್ತದೆ. ನಿಜ.  ಆದರೆ, ಇದನ್ನು ದಿನ ನಿತ್ಯ ವಿಪರೀತವಾಗಿ ಸೇವಿಸುತ್ತಿದ್ದರೆ ಅದು ಖಂಡಿತ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬಿಯರ್‍ಗಳಲ್ಲಿ ಅಡಗಿರುವ ಇಂಥ ಅಪಾಯಕಾರಿ ರಾಸಾಯನಿಕಗಳಿಂದ ಅಪಾಯದ ಗಂಡಾಂತರಗಳನ್ನು ಕಡಿಮೆ ಮಾಡಿಕೊಳ್ಳಿ. ಆರೋಗ್ಯಕರ ಆಹಾರವನ್ನು ಸೇವಿಸಿ.

Facebook Comments

Sri Raghav

Admin