ಇನ್ನು ಮುಂದೆ ಯುಪಿಎಸ್‍ಸಿಯಿಂದಲೇ ಡಿಜಿಪಿ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

UPSC
ನವದೆಹಲಿ, ಜು.3- ಇನ್ನು ಮುಂದೆ ಪೊಲೀಸ್ ಮಹಾ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯನ್ನು ಕೇಂದ್ರ ಲೋಕ ಸೇವಾ ಆಯೋಗವೇ ನಡೆಸಲಿದೆ. ಈ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಒಂದು ವೇಳೆ ಕಾನೂನು ಮೀರಿ ಪೊಲೀಸ್ ಮಹಾನಿರ್ದೇಶಕರನ್ನು ಆಯ್ಕೆ ಮಾಡಿದರೆ ಆ ಆದೇಶವನ್ನು ಅಮಾನತುಪಡಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಹಾಲಿ ಡಿಜಿಪಿ ಅವರ ನಿವೃತ್ತಿಗೆ ಮೂರು ತಿಂಗಳು ಮುನ್ನವೇ ಯಾವ ಅಧಿಕಾರಿಯನ್ನು ಪೊಲೀಸ್ ಮಹಾ ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕು ಎಂಬ ಅಧಿಕಾರಿಗಳ ಪಟ್ಟಿಯನ್ನು ಆಯಾ ರಾಜ್ಯಗಳು ಯುಪಿಎಸ್‍ಸಿಗೆ ಸಲ್ಲಿಸಬೇಕು. ಕೇಂದ್ರ ಲೋಕಸೇವಾ ಆಯೋಗ ಆಯಾ ರಾಜ್ಯಗಳು ಸಲ್ಲಿಸಿದ ಆಯ್ಕೆ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಆಯಾ ಅಧಿಕಾರಿಗಳ ಸಾಮಥ್ರ್ಯವನ್ನು ಪರಿಗಣಿಸಿ ಮೂರು ಹೆಸರನ್ನು ಶಿಫಾರಸು ಮಾಡಬೇಕು.

ಲೋಕಸೇವಾ ಆಯೋಗ ಶಿಫಾರಸು ಮಾಡಿದ ಮೂವರು ಅಧಿಕಾರಿಗಳಲ್ಲಿ ಒಬ್ಬರನ್ನು ಡಿಜಿಪಿಯನ್ನಾಗಿ ನೇಮಕ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇರುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

Facebook Comments

Sri Raghav

Admin