ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಗೋ.ಮಧುಸೂದನ್ 26 ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Madhusudhan--01
ಮೈಸೂರು, ಜು.3- ಮೈಸೂರು ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ಮೊಕದ್ದಮೆಯಲ್ಲಿ ಆರು ಮಂದಿ ಆರೋಪಿಗಳ ಪೈಕಿ ತಾವು ಮೊದಲನೆಯವರು ಎಂಬುದಾಗಿ ಒಪ್ಪಿಕೊಳ್ಳುವಿರಾ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರು ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ರಂಗಪ್ಪ ಅವರಿಗೆ 26 ಪ್ರಶ್ನೆಗಳನ್ನು ಹಾಕಿದ್ದಾರೆ. ಡಾ.ಎಂ.ಆರ್.ನಿಂಬಾಳ್ಕರ್ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯಲ್ಲಿ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶಿಸಲಾಗಿದೆ. ಅಂದಿನ ಕುಲಪತಿಗಳಾಗಿದ್ದ ತಾವು ಹಾಗೂ ಹಾಲಿ ಕುಲಸಚಿವರಾದ ಪ್ರೊ.ರಾಜಣ್ಣ ಕೂಡ ಆರೋಪಿಗಳಾಗಿದ್ದಾರೆ. ಈ ಆರೋಪದಲ್ಲಿ ತಾವು ಅಮಾಯಕರೆಂಬುದನ್ನು ಸಾಬೀತುಪಡಿಸುವ ಲಿಖಿತ ವಿವರಣೆಯನ್ನು ನೀಡುತ್ತೀರಾ ಎಂಬ ಇನ್ನೊಂದು ಪ್ರಮುಖ ಪ್ರಶ್ನೆಯನ್ನು ಹಾಕಿದ್ದಾರೆ.

ಕರ್ನಾಟಕ ವಿಶ್ವವಿದ್ಯಾನಿಲಯದ ನಿಯಮದಂತೆ ರಾಜ್ಯ ಹೊರತುಪಡಿಸಿ ಬೇರೆಡೆ ಎಲ್ಲೂ ಕೆಎಸ್‍ಒಯು ಚಟುವಟಿಕೆ ನಡೆಸುವಂತಿಲ್ಲ. ಹಾಗಿದ್ದರೂ ದೇಶ-ವಿದೇಶಗಳಲ್ಲಿ ಕೇಂದ್ರಗಳನ್ನು ನಿಮ್ಮ ಅವಧಿಯಲ್ಲಿ ಹೇಗೆ ತೆರೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಹೀಗೆ 26 ಪ್ರಶ್ನೆಗಳನ್ನು ಕೇಳಿರುವ ಗೋ.ಮಧುಸೂದನ್ ಇವುಗಳಿಗೆ ಶೀಘ್ರ ಉತ್ತರ ಕೊಡಬೇಕೆಂದು ಪ್ರೊ.ರಂಗಪ್ಪ ಅವರನ್ನು ಒತ್ತಾಯಿಸಿದರು.

ಬಹಿರಂಗ ಚರ್ಚೆ ರದ್ದು:
ಕೆಎಸ್‍ಒಯು ಹಾಗೂ ಮೈಸೂರು ವಿವಿ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಇರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಇಂದು ಹಮ್ಮಿಕೊಂಡಿದ್ದ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಗೋ.ಮಧುಸೂದನ್ ನಡುವಿನ ಬಹಿರಂಗ ಚರ್ಚೆ ರದ್ದಾಗಿದೆ.

Facebook Comments

Sri Raghav

Admin