ಕ್ಷುಲ್ಲಕ ಕಾರಣಕ್ಕೆ ಬ್ಲೇಡಿನಿಂದ ಬಾಲಕನ ಕತ್ತು ಕೊಯ್ದ ಶಿಕ್ಷಕಿ..!

ಈ ಸುದ್ದಿಯನ್ನು ಶೇರ್ ಮಾಡಿ

Teacher--01

ದೊಡ್ಡಬಳ್ಳಾಪುರ,ಜು.4- ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯೊಬ್ಬರು ಬಾಲಕನ ಕತ್ತು ಕೊಯ್ದಿರುವ ಘಟನೆ ತಾಲ್ಲೂಕಿನ ಕಾಸಘಟ್ಟ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಅದೇ ಗ್ರಾಮದ ಪೃಥ್ವಿರಾಜ್(7) ಗಂಭೀರವಾಗಿ ಗಾಯಗೊಂಡಿರುವ ಬಾಲಕ. ಕಸಘಟ್ಟ ಗ್ರಾಮದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿರುವ ಮುನಿರತ್ನಮ್ಮ ಈ ಕೃತ್ಯ ನಡೆಸಿದ್ದು ಗಾಯಗೊಂಡಿರುವ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಮೊಮ್ಮಗನ ಜತೆ ಜಗಳವಾಡಿದ್ದಕ್ಕೆ ಕೋಪಗೊಂಡ ಶಿಕ್ಷಕಿ ಪೃಥ್ವಿರಾಜ್‍ಗೆ ಕೈಯಿಂದ ಥಳಿಸಿ ಬ್ಲೇಡಿನಿಂದ ಕುತ್ತಿಗೆ ಕೊಯ್ದಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin