ಮಾನಸ ಸರೋವರಕ್ಕೆ ತೆರಳಿದ್ದ ಮೈಸೂರು ಯಾತ್ರಿಕರು ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ

mount-evarest
ಮೈಸೂರು,ಜು.4- ಮಾನಸ ಸರೋವರಕ್ಕೆ ತೆರಳಿದ್ದ ಮೈಸೂರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲೇ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಿನ್ನೆ ರಾತ್ರಿ ಬಂದ ಮಾಹಿತಿ ಯಲ್ಲಿ 12 ಮಂದಿ ಯಾತ್ರಾರ್ಥಿಗಳು ನೇಪಾಳದ ಸಿಮಿಕೋಟ್‍ನಲ್ಲಿ ಸಿಲುಕಿದ್ದಾ ರೆಂದು ಮಾಹಿತಿ ಸಿಕ್ಕಿತ್ತು.  ಆನಂತರ ಅವರೆಲ್ಲರೂ ಸುರಕ್ಷಿತರಾಗಿದ್ದಾರೆಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್‍ಅವರಿಗೆ ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರ ಸುಧೀರ್ ಪ್ರಭಾಕರ್, ಜಗದೀಶ್ವರೀ ಸುಧೀರ್, ಕುವೆಂಪುನಗರ ಅಮೃತ, ಸಿದ್ಧಾರ್ಥ ಬಡಾವಣೆಯ ಡಾ.ಪ್ರೇಮ, ಗಿರೀಶ್, ಚೈತ್ರಾ, ಗಿರೀಶ್, ಪೂರ್ಣಿಮಾ, ತೇಜಸ್ವಿನಿ, ಜಯಶ್ರೀ, ಮಂಜೇಗೌಡ ಹಾಗೂ ಚಂದ್ರಕಲಾ ಅವರು ಮಾನಸ ಸರೋವರ ಯಾತ್ರೆಗೆ ತೆರಳಿದ್ದರು ಎಂದು ಜಿಲ್ಲಾಡಳಿತ ತಿಳಿಸಿದೆ.  ಮೈಸೂರಿನ ಯಾತ್ರಾರ್ಥಿಗಳ್ಯಾರು ತೊಂದರೆಗೆ ಸಿಲುಕಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಇವರ ಪೈಕಿ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಚಿಕಿತ್ಸೆ, ಆರೈಕೆ ನಡೆಯುತ್ತಿವೆ, ಯಾತ್ರಾರ್ಥಿಗಳನ್ನು ಸುರಕ್ಷಿತ ಮಾರ್ಗದ ಮೂಲಕ ಕರೆಸಿಕೊಳ್ಳು ವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಾಗಿದೆ ಎಂದು ತಿಳಿಸಿದ್ದಾರೆ.  ಇಂದು ಸಂಜೆಯೊಳಗೆ ಈ ಎಲ್ಲ ಯಾತ್ರಾರ್ಥಿಗಳು ಮೈಸೂರಿಗೆ ತಲುಪಬಹುದು ಎಂದು ತಿಳಿಸಿದ್ದಾರೆ.

Facebook Comments

Sri Raghav

Admin