ದೋಣಿ ಮುಳುಗಿ 70ಕ್ಕೂ ಹೆಚ್ಚು ಮಂದಿ ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

Indonasia--01

ಜಕಾರ್ತ, ಜು.4-ಇಂಡೋನೆಷ್ಯಾದ ಕರಾವಳಿ ಪ್ರದೇಶವೊಂದರಲ್ಲಿ ದೋಣಿ ಮುಳುಗಿ 70ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗ್ನೇಯ ಏಷ್ಯಾದ ದ್ವೀಪ ಸಮೂಹದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ನೌಕಾ ದುರಂತ ಇದಾಗಿದೆ. ಈ ದೋಣಿ ದುರಂತದಲ್ಲಿ ಕೆಲವರು ಕಣ್ಮರೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಎಂ ಲೆಸ್ಟರಿ ಹೆಸರಿನ ದೋಣಿ ಸುಮಾರು 140 ಪ್ರಯಾಣಿಕರು ಹಾಗೂ ಅನೇಕ ವಾಹನಗಳನ್ನು ಹೊತ್ತೊಯ್ಯುತ್ತಿತ್ತು. ಸುಲಾವೆಸಿ ದ್ವೀಪದ ಬಳಿ ಈ ನೌಕೆಯು ಮುಳುಗಡೆಯಾಯಿತು. ಈ ದುರ್ಘಟನೆಯಲ್ಲಿ ಈವರೆಗೆ 70ಕ್ಕೂ ಹೆಚ್ಚು ಮಂದಿ ನೀರು ಪಾಲಾಗಿದ್ದಾರೆ. ಇನ್ನು ಹಲವರು ಕಣ್ಮರೆಯಾಗಿದ್ದು, ಕೆಲವರು ಮಾತ್ರ ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಇನ್ನು ಕೆಲ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ನಾಪತ್ತೆಯಾಗಿರುವ ಮಂದಿಗಾಗಿ ತೀವ್ರ ಶೋಧ ಮುಂದುವರಿದಿದೆ.

Facebook Comments

Sri Raghav

Admin