ನಿಧಿಗಾಗಿ ಗಂಗರ ಕಾಲದ ಚಾಮುಂಡೇಶ್ವರಿ ವಿಗ್ರಹ ದ್ವಂಸ

ಈ ಸುದ್ದಿಯನ್ನು ಶೇರ್ ಮಾಡಿ

Nidhi--01

ಚಿಕ್ಕಮಗಳೂರು, ಜು.4- ಗಂಗರ ಕಾಲಕ್ಕೆ ಸೇರಿದ ಚಾಮುಂಡೇಶ್ವರಿ ವಿಗ್ರಹವನ್ನು ದ್ವಂಸಗೊಳಿಸಿರುವ ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಅಯ್ಯನಕೆರೆ ಬಳಿಯ ಬಳ್ಳಾಳೇಶ್ವರ ದೇಗುಲದಲ್ಲಿ ದುಷ್ಕರ್ಮಿಗಳು ಚಾಮುಂಡೇಶ್ವರಿ ವಿಗ್ರಹವನ್ನು ದ್ವಂಸಗೊಳಿಸಿ ಅದರ ಕೆಳಭಾಗ ಆಗೆದು ಪರಾರಿಯಾಗಿದ್ದಾರೆ. ಈ ಘಟನೆಯನ್ನು ಗಮನಿಸಿದರೆ ನಿಧಿ ಆಸೆಗಾಗಿ ದುಷ್ಕರ್ಮಿಗಳು ಕೃತ್ಯವೆಸಗಿರುವ ಅನುಮಾನ ಮೂಡಿದೆ. ಸುದ್ದಿ ತಿಳಿದ ಸಖರಾಯಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin