ಸಮಿತಿಗಳಿಗೆ ಸದಸ್ಯರ ಚುನಾವಣಾ ಪ್ರಸ್ತಾವನೆ ಮಂಡಿಸಿದ ಸಚಿವ ಕೃಷ್ಣಭೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Krishna-Byregowda
ಬೆಂಗಳೂರು,ಜು.4-ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸೇರಿದಂತೆ ಒಟ್ಟು 10 ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸಬೇಕೆಂದು ಚುನಾವಣಾ ಪ್ರಸ್ತಾವನೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಮಂಡಿಸಿದರು. ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಹಾಗೂ ನಡವಳಿಕೆಯ ನಿಯಮಗಳ ಅನ್ವಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸಾರ್ವಜನಿಕ ಉದ್ದಿಮೆಗಳ ಸಮಿತಿ, ಅಧೀನ ಶಾಸನ ರಚನಾ ಸಮಿತಿ, ಭರವಸೆಗಳ ಸಮಿತಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಸಮಿತಿಗೆ ತಲಾ 15 ಸದಸ್ಯರನ್ನು ಚುನಾಯಿಸುವಂತೆ ಸೂಚಿಸಲಾಯಿತು.

ಅಂದಾಜುಗಳ ಸಮಿತಿಗೆ 18 ಮಂದಿ ಸದಸ್ಯರನ್ನು ಹಕ್ಕು ಬಾಧ್ಯತೆಗಳ ಸಮಿತಿಗೆ 9 ಜನ ಸದಸ್ಯರನ್ನು ಖಾಸಗಿ ವಿಧೇಯಕಗಳು ಹಾಗೂ ನಿರ್ಣಯಗಳ ಸಮಿತಿಗೆ 10 ಜನ ಸದಸ್ಯರನ್ನು , ವಸತಿ ಸೌಕರ್ಯಗಳ ಸಮಿತಿಗೆ 12 ಜನ ಸದಸ್ಯರನ್ನು ನೇಮಿಸುವಂತೆ ಚುನಾವಣಾ ಪ್ರಸ್ತಾವದಲ್ಲಿ ಮಂಡಿಸಲಾಯಿತು.

Facebook Comments

Sri Raghav

Admin