“ಸಾಲಮನ್ನಾ ಪ್ಯಾಶನ್ ಆಗಬಾರದು, ರೈತರಿಗೆ ಸಾಲ ತೀರಿಸುವ ಶಕ್ತಿ ತುಂಬಿ” : ಸ್ಪೀಕರ್

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar-Session
ಬೆಂಗಳೂರು, ಜು.4- ಎಲ್ಲರೂ ಸಾಲ ಮನ್ನದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಸಾಲ ಮನ್ನಾ ಮಾಡುವುದು ಪ್ಯಾಶನ್ ಆಗಬಾರದು. ಬದಲಾಗಿ ರೈತರಿಗೆ ಸೌಲಭ್ಯಗಳನ್ನು ಕೊಟ್ಟು ಸಾಲ ತೀರಿಸುವ ಶಕ್ತಿ ತುಂಬುವಂತಾಗಬೇಕೆಂದು ಸ್ಪೀಕರ್ ರಮೇಶ್‍ಕುಮಾರ್ ಹೇಳಿದರು. ವಿಧಾನಸಭೆಯಲ್ಲಿಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡುವೆ ಮಧ್ಯಪ್ರವೇಶಿಸಿದ ಅವರು, ಶಾಸನ ಸಭೆಯಲ್ಲಿ ಮಾತನಾಡುವ ಎಲ್ಲಾ ಶಾಸಕರು ಸಾಲ ಮನ್ನಾ ಮಾಡಿ ಎಂದೇ ಒತ್ತಾಯಿಸುತ್ತಿದ್ದಾರೆ. ಯಾರೂ ಕೂಡ ಸಾಲ ತೀರಿಸುವ ಶಕ್ತಿ ತುಂಬುವ ಮಾತನಾಡುತ್ತಿಲ್ಲ.

ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ರಸಗೊಬ್ಬರ, ಸರಿಯಾದ ವೈಜ್ಞಾನಿಕ ಬೆಲೆ ಕೊಟ್ಟರೆ ರೈತರು ತನ್ನಷ್ಟಕ್ಕೆ ತಾವೇ ಸಾಲ ತೀರಿಸುತ್ತಾರೆ. ಶಾಸಕರು ಆ ವಿಷಯವಾಗಿ ಹೆಚ್ಚು ಚರ್ಚೆ ಮಾಡಬೇಕು.
ಯಾವುದೇ ಸರ್ಕಾರವಾದರೂ ಸರಿ ಸಾಲ ಮನ್ನಾಮಾಡುವುದು ಪ್ಯಾಶನ್ ಆಗಬಾರದು. ಹಾಗೆ ನೋಡಿದರೆ ಸ್ತ್ರಿಶಕ್ತಿ ಸಂಘಗಳ ಸದಸ್ಯರೆಲ್ಲರೂ ಬಡತನರೇಖೆಗಿಂತ ಕೆಳಗಿರುವವರು ಅವರ ಸಾಲ ಮರುಪಾವತಿಯ ಪ್ರಮಾಣ ಸಮರ್ಪಕವಾಗಿದೆ. ಅವರ ಸಾಲ ಮನ್ನಾ ಮಾಡುವುದು ಸೂಕ್ತವಾದದ್ದು ಎಂದು ಹೇಳಿದರು.

ಇದಕ್ಕೂ ಮುನ್ನ ಶಾಸಕ ಶ್ರೀರಾಮುಲು ಮಾತನಾಡಿ, ಕುಮಾರಸ್ವಾಮಿ ಅವರು ಚುನಾವಣೆ ವೇಳೆ ಮುಖ್ಯಮಂತ್ರಿಯಾದ 24 ಗಂಟೆಯೊಳಗಾಗಿ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದರು. ಮುಖ್ಯಮಂತ್ರಿ ಆದ ಮೇಲೆ 15 ದಿನ ಕಾಲವಕಾಶ ಕೇಳಿದ್ದರು. ಈಗಲಾದರೂ ಸಾಲ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.

Facebook Comments

Sri Raghav

Admin