ಉತ್ತರಪ್ರದೇಶದಲ್ಲಿ ಗುಂಡಿಟ್ಟು ಆರ್‌ಎಸ್‌ಎಸ್ ನಾಯಕನ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Diring--01
ಫಿರೋಜಾಬಾದ್(ಉ.ಪ್ರ.), ಜು.4-ಮೋಟಾರ್ ಬೈಕ್‍ನಲ್ಲಿ ಬಂದ ಇಬ್ಬರು ಹಂತಕರು ಸ್ಥಳೀಯ ಆರ್‍ಎಸ್‍ಎಸ್ ನಾಯಕರೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ಉತ್ತರಪ್ರದೇಶದ ದಯಾನಗರದಲ್ಲಿ ನಡೆದಿದೆ. ಸಂದೀಪ್ ಶರ್ಮ(34) ಹಂತಕರ ಗುಂಡಿಗೆ ಬಲಿಯಾದ ರಾಷ್ಟ್ರೀಯ ಸ್ವಯಂಸೇವಕ್ ಸಂಘ(ಆರ್‍ಎಸ್‍ಎಸ್) ಸ್ಥಳೀಯ ನಾಯಕರು.

ಗುಂಡೇಟಿನಿಂದ ತೀವ್ರ ಗಾಯಗೊಂಡ ಸಂದೀಪ್ ಆಸ್ಪತ್ರೆಗೆ ಸೇರುವ ಮಾರ್ಗದಲ್ಲೇ ಕೊನೆಯುಸಿರೆಳೆದರು. ಸ್ಥಳೀಯ ಬಿಜೆಪಿ ಶಾಸಕ ಮನೀಷ್ ಅಸಿಜಾ ಹಾಗೂ ಅಸಂಖ್ಯಾತ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದ್ದರು. ಈ ಘಟನೆಯಿಂದ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಹತ್ಯೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin