“ಮುಸ್ಲಿಮರ ಅಲ್ಪಸಂಖ್ಯಾತ ಮಾನ್ಯತೆ ಹಿಂಪಡೆದು, 2 ಮಕ್ಕಳ ನೀತಿ ಜಾರಿಗೊಳಿಸಿ’ : ತೊಗಾಡಿಯಾ

ಈ ಸುದ್ದಿಯನ್ನು ಶೇರ್ ಮಾಡಿ

Praveen-Togadia02
ಜೈಪುರ್.ಜು.4 : ಈ ಕೂಡಲೇ ಮುಸ್ಲಿಮರ ಅಲ್ಪಸಂಖ್ಯಾತ ಮಾನ್ಯತೆ ಹಿಂಪಡೆಯಬೇಕು ಮತ್ತು ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕು, ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮುಸ್ಲಿಮರಿಗಾಗಿ ಖರ್ಚು ಮಾಡಬಾರದು. ಅದರ ಬದಲು ಇತರೆ ಸಮುದಾಯದ ಬಡವರ ಕಲ್ಯಾಣಕ್ಕಾಗಿ ಖರ್ಚು ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್’ನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಆಗ್ರಹಿಸಿದ್ದಾರೆ. ಜೈಪುರದಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ತೊಗಾಡಿಯಾ, ಮುಸ್ಲಿಮರಿಗೆ ನೀಡಿದ ಅಲ್ಪಸಂಖ್ಯಾತ ಸ್ಥಾನಮಾನವನ್ನು ವಾಪಸ್ ಪಡೆದು, ಅವರಿಗೂ 2 ಮಕ್ಕಳ ನೀತಿ ಅನ್ವಯವಾಗುವಂತೆ ಮಾಡಿದರೆ, 20 ಕೋಟಿ ಹಿಂದು ವೋಟ್ ಬ್ಯಾಂಕ್ ಪಡೆಯಬಹುದು ಎಂದಿದ್ದಾರೆ.

ನಾನು ಎಂದಿಗೂ ಹಿಂದುತ್ವದ ಅಜೆಂಡಾ ಇಟ್ಟುಕೊಂಡೇ ಹೋರಾಡುವವನು. ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶ, ಕಾರ್ಮಿಕರ ರಕ್ಷಣೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇವುಗಳ ಬಗ್ಗೆ ನಾನು ಹೆಚ್ಚು ಗಮನ ಹರಿಸುತ್ತೇನೆ’ ಎಂದು ಅವರು ಹೇಳಿದರು.

ಇದೆ ವೇಳೆ ಪ್ರಧಾನಿ ಮೋದಿ ವಿರುದ್ದವೂ ಹರಿಹಾಯ್ದ ತೊಗಾಡಿಯಾ ಹಣದುಬ್ಬರ, ರೈತರ ಆತ್ಮಹತ್ಯೆ ತಡೆಯುವಲ್ಲಿ ಮತ್ತು ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹಿಂದು ಪರಿಷತ್ತನ್ನು ಸ್ಥಾಪಿಸಿರುವ ತೊಗಾಡಿಯಾ ‘ನಮ್ಮ ನೂತನ ಸಂಘಟನೆ ರಾಜಕೀಯದ ಮೇಲೆ ಪ್ರಭಾವ ಬೀರಲು ದೇಶದಲ್ಲಿ 20 ಕೋಟಿ ಹಿಂದೂಗಳ ಮತ ಬ್ಯಾಂಕ್ ಅನ್ನು ಸೃಷ್ಟಿಸಲಿದೆ ಎಂದಿದ್ದಾರೆ.

Facebook Comments

Sri Raghav

Admin