ನಿವೃತ್ತ ಸಿಸಿಬಿ ಇನ್‍ಸ್ಪೆಕ್ಟರ್’ನ ಕತ್ತುಕೊಯ್ದು ಬರ್ಬರವಾಗಿ ಕೊಂದಿದ್ದ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

2-Arrested-Channapatna--01

ಚನ್ನಪಟ್ಟಣ, ಜು.4- ಕೆಲ ದಿನಗಳ ಹಿಂದೆ ತಾಲ್ಲೂಕಿನ ಮಾಗನೂರು ರಸ್ತೆಯಲ್ಲಿ ನಡೆದ ನಿವೃತ್ತ ಸಿಸಿಬಿ ಪಿಎಸ್‍ಐರವರ ಭೀಕರ ಕೊಲೆಯ ಪ್ರಕರಣ ಬೇಧಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೀಕರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಶಂಕರ್ ಹಾಗೂ ನಟರಾಜ್ ಇವರಿಬ್ಬರು ಹಣಕಾಸು ವ್ಯವಹಾರದ ವಿಚಾರವಾಗಿ ಸಂಚು ರೂಪಿಸಿ ನಿವೃತ್ತ ಸಿಸಿಬಿ ಪಿಎಸ್‍ಐ ಸಿದ್ದಲಿಂಗಯ್ಯರವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣದ ಬಗ್ಗೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ಪೊಲೀಸ್ ಉಪವಿಭಾಗಾಧಿಕಾರಿ ಆರ್.ಮಂಜುನಾಥ್ ಗ್ರಾಮಾಂತರ ವೃತ್ತ ನಿರೀಕ್ಷಕ ಕುಮಾರ್ ಮಾರ್ಗದರ್ಶನದಲ್ಲಿ ಠಾಣೆಯ ಪಿಎಸ್‍ಐ ಶಿವಕುಮಾರ್ ಹಾಗೂ ತಂಡ ಆರೋಪಿಗಳನ್ನು ಪತ್ತೆಕಾರ್ಯದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಹಲವಾರು ಮಾಹಿತಿಯನ್ನು ಕಲೆಹಾಕಿ ಕೊಲೆಯಾದ ನಿವೃತ್ತ ಸಿಸಿಬಿ ಪಿಎಸ್‍ಐ ಸಿದ್ದಲಿಂಗಯ್ಯರವರ ಖಾಸಾ ಸ್ನೇಹಿತ ಶಂಕರ ಹಾಗೂ ಈತನ ಸ್ನೇಹಿತ ನಟರಾಜ್‍ಪೂರ್ವಯೋಜಿತ ಪ್ಲಾನ್‍ನಂತೆ ಆರೋಪಿ ಶಂಕರನೇ ಸಿದ್ದಲಿಂಗಯ್ಯರವರನ್ನು ದ್ವಿಚಕ್ರವಾಹನದಲ್ಲಿ ಕರೆತಂದು ಕಣ್ಣಿಗೆ ಕಾರದ ಪುಡಿ ಎರಚಿ ಸ್ನೇಹಿತ ನಟರಾಜ್ ಜೊತೆ ಸೇರಿಕೊಂಡು ಆತನ ಕತ್ತನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ನಿವೃತ್ತ ಸಿಸಿಬಿ ಪಿಎಸ್‍ಐ ಸಿದ್ದಲಿಂಗಯ್ಯ ನಿವೃತ್ತಿ ನಂತರ ಫೈನಾನ್ಸ್ ನಡೆಸುತ್ತಿದ್ದನು 20 ವರ್ಷದ ಆಪ್ತ ಸ್ನೇಹಿತ ಶಂಕರನೇ ಹಣಕಾಸು ವ್ಯವಹಾರವನ್ನು ನಿಬಾಯಿಸುತ್ತಿದ್ದನೆನ್ನಲಾಗಿದ್ದು ಸಾಕಷ್ಟು ಹಣ ಸಾಲ ಪಡೆದಿದ್ದ ಶಂಕರ ಹಾಗೂ ನಟರಾಜು ಇಬ್ಬರನ್ನು ಪಡೆದಿರುವ ಸಾಲದ ಹಣವನ್ನು ತೀರಿಸುವಂತೆ ಬಲವಂತ ಪಡಿಸಿದ್ದೇ ಈ ಕೊಲೆಗೆ ಕಾರಣ ಎಂದು ಆರೋಪಿಗಳು ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin