#Budget : ಅನ್ನದಾತನ ಸಾಲ ಮನ್ನಾ ಮಾಡಲು ಅನ್ನಭಾಗ್ಯದ 2 ಕೆಜಿ ಅಕ್ಕಿ ಕಡಿತ

ಈ ಸುದ್ದಿಯನ್ನು ಶೇರ್ ಮಾಡಿ

Annabhagya--01

ಬೆಂಗಳೂರು. ಜು.05 : ಅನ್ನದಾತನ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಪಡಿತರದಾರರಿಗೆ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣಕ್ಕೆ ಕತ್ತರಿ ಹಾಕಿದ್ದಾರೆ. ಏಳು ಕೆಜಿಯಿಂದ ಐದು ಕೆಜಿಗೆ ಇಳಿಸಲಾಗುತ್ತಿದ್ದು ಉಚಿತವಾಗಿ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಸಬ್ಸಿಡಿ ದರದಲ್ಲಿ ಅರ್ಧ ಕೆಜಿ ತೊಗರಿ ಬೇಳೆ ಮತ್ತು ಒಂದು ಕೆಜಿ ಪಾಮ್‌ ಆಯಿಲ್‌ ನೀಡಲಾಗುವುದು. ಅದೇ ರೀತಿ ಒಂದು ಕೆಜಿ ಅಯೋಡಿನ್‌ಯಕ್ತ ಉಪ್ಪು, ಒಂದು ಕೆಜಿ ಸಕ್ಕರೆ ವಿತರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ವರ್ಷಕ್ಕೊಂದು ತಿಂಗಳು ಆಹಾರ ಸುರಕ್ಷಾ ಮಾಹೆ ಯೋಜನೆಯಡಿ ಜಾಗೃತ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಪಡಿತರ ಚೀಟಿಗಳ ವಾರ್ಷಿಕ ಪರಿಷ್ಕರಣೆ ನಡೆಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

Facebook Comments

Sri Raghav

Admin