30 ವರ್ಷಗಳಿಂದ ಸಿನಿಮಾ ನೋಡಿಲ್ಲ ವಂತೆ ಸೇನಾ ಮುಖ್ಯಸ್ಥ ರಾವತ್

ಈ ಸುದ್ದಿಯನ್ನು ಶೇರ್ ಮಾಡಿ

Rawat--01
ನವದೆಹಲಿ, ಜು.5-ನಾನು ಕಳೆದ 30 ವರ್ಷಗಳಿಂದ ಒಂದೇ ಒಂದು ಸಿನಿಮಾ ನೋಡಿಲ್ಲ ಹಾಗೂ ಒಂದೇ ಸ್ಥಳದಲ್ಲಿ ಮೂರು ಗಂಟೆಗಳ ಕಾಲ ಕುಳಿತಿಲ್ಲ. ಇವುಗಳಿಗೆ ನನ್ನ ಬಳಿ ಸಮಯವೇ ಇಲ್ಲ-ಇದು ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕಾಲದ ಮಹತ್ವದ ಬಗ್ಗೆ ಹೇಳಿರುವ ಮಾತುಗಳು. ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾವತ್, ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.  ಶಾಲೆಯ ತರಗತಿಯಲ್ಲಾಗಲಿ ಅಥವಾ ಜೀವನದಲ್ಲಾಗಲಿ ನೀವು ವಿಫಲವಾದರೆ ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ. ಪರಿಶ್ರಮದೊಂದಿಗೆ ಮರಳಿ ಯತ್ನ ಮಾಡಿದರೆ ಯಶಸ್ಸು ಲಭಿಸುತ್ತದೆ ಎಂದು ಅವರು ವಿದ್ಯಾರ್ಥಿ ಸಮುದಾಯಕ್ಕೆ ಸಲಹೆ ಮಾಡಿದರು. ನೀವು ನಮ್ಮ ದೇಶದ ಭವಿಷ್ಯ. ನೀವು ಸೋತಾಗ ಕುಗ್ಗಬೇಡಿ, ಗೆದ್ದಾಗ ಉಬ್ಬಬೇಡಿ. ಪರಿಶ್ರಮ ಮತ್ತು ಪ್ರಯತ್ನಗಳೇ ಯಶಸ್ಸಿನ ಸೂತ್ರ ಎಂದು ಸೇನಾ ಮುಖ್ಯಸ್ಥರು ವ್ಯಾಖ್ಯಾನಿಸಿದರು.

Facebook Comments

Sri Raghav

Admin