#Budget : ವಾಹನ ಸವಾರರು ಮತ್ತು ಕುಡುಕರಿಗೆ ಕುಮಾರಸ್ವಾಮಿ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Petrol--01
ಬೆಂಗಳೂರು, ಜು.5-ರೈತರ ಸಾಲಮನ್ನಾಕ್ಕೆ 34 ಸಾವಿರ ಕೋಟಿ ರೂ.ಗಳ ಅನಿವಾರ್ಯತೆ ಇರುವುದರಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿರುವ ಮುಖ್ಯಮಂತ್ರಿಗಳು ತೈಲ ಉತ್ಪನ್ನಗಳು ಹಾಗೂ ಮದ್ಯದ ಮೇಲಿನ ಸೆಸ್ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ.30 ರಿಂದ ಶೇ.32ಕ್ಕೆ, ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ.19ರಿಂದ ಶೇ.21ಕ್ಕೆ ಹೆಚ್ಚಿಸುವ ವಿಚಾರವನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ. ( ಕುಮಾರಣ್ಣನ ಲೆಕ್ಕಾಚಾರದ ಕಂಪ್ಲೀಟ್ ಡೀಟೇಲ್ಸ್ )

ಸೆಸ್ ಹೆಚ್ಚಳದಿಂದ ಇನ್ನು ಮುಂದೆ 1 ಲೀಟರ್ ಪೆಟ್ರೋಲ್‍ಗೆ 1 ರೂ. 14 ಪೈಸೆ ಹಾಗೂ ಡೀಸೆಲ್ 1 ಲೀಟರ್‍ಗೆ 1ರೂ. 12 ಪೈಸೆಯಷ್ಟು ಹೆಚ್ಚಳವಾಗಲಿದೆ. ಸೆಸ್ ದರ ಹೆಚ್ಚಳ ಮಾಡಿದರೂ ನೆರೆ ರಾಜ್ಯಗಳಿಗೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ದರ ಕರ್ನಾಟಕದಲ್ಲಿ ಕಡಿಮೆಯಾಗಿರುತ್ತದೆ ಎಂಬುದನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ.  ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲ್ಯಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.4ರಷ್ಟು ಹೆಚ್ಚಳವಾಗಲಿದೆ. ಇದರಿಂದ ಸರ್ಕಾರ 19,750 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.  ಸರ್ಕಾರದ ಈ ನಿಧಾರದಿಂದ ಪೆಟ್ರೋಲ್ ಬೆಲೆ ಹೆಚ್ಚಳವಾಗಲಿದ್ದು, ಮದ್ಯ ದುಬಾರಿಯಾಗಲಿದೆ.

Facebook Comments

Sri Raghav

Admin