36 ದಿನಗಳ ನಂತರ ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Petrol-Pump

ನವದೆಹಲಿ, ಜು.5-ಒಂದು ತಿಂಗಳ ನಂತರ ಇದೇ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಇಂದು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ದರಗಳ ಏರಿಕೆ ಮತ್ತು ರೂಪಾಯಿ ದುರ್ಬಲದಿಂದಾಗಿ 36 ದಿನಗಳ ಬಳಿಕ ಇಂಧನ ಬೆಲೆ ಹೆಚ್ಚಿಸಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 16 ಪೈಸೆಗಳು ಹಾಗೂ ಲೀಟರ್ ಡೀಸೆಲ್‍ಗೆ 12 ಪೈಸೆಗಳನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ದೆಹಲಿಯಲಲಿ ಪೆಟ್ರೋಲ್ ದರ ಲೀಟರ್‍ಗೆ 75.71 ರೂ.ಗಳಿಗೆ (ಹಿಂದಿನ ದರ 75.55 ರೂ.ಗಳು) ಏರಿದ್ದರೆ, ಡೀಸೆಲ್ ಬೆಲೆ 67.38 ರೂ.ಗಳಿಂದ 67.50 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಭಾರತೀಯ ತೈಲ ನಿಗಮದ(ಐಒಸಿ) ಅಧ್ಯಕ್ಷ ಸಂಜಯ್ ಸಿಂಗ್ ತಿಳಿಸಿದ್ದಾರೆ.

Facebook Comments

Sri Raghav

Admin