ರಾಹುಲ್ ‘ಮಿನಿ ಮಾಸ್ಟರ್ ಪೀಸ್’

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ಮುಂಬೈ, ಜು.6- ಮುಂಬರುವ ವಿಶ್ವಕಪ್‍ನಲ್ಲಿ ಯುವ ಪ್ರತಿಭೆ ರಾಹುಲ್ ಉತ್ತಮ ಬ್ಯಾಟ್ಸ್‍ಮನ್ ಪಾತ್ರವನ್ನು ನಿರ್ವಹಿಸಿ ತಂಡದ ಮಿನಿ ಮಾಸ್ಟರ್ ಪೀಸ್ ಆಗಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಗುಣಗಾನ ಮಾಡಿದ್ದಾರೆ. ಆಂಗ್ಲರ ನಾಡಿನಲ್ಲಿ ವಿರಾಟ್ ಕೊಹ್ಲಿ ತಂಡದ ಸಾರಥ್ಯವನ್ನು ಸಾಮಥ್ರ್ಯವಾಗಿ ಮುನ್ನಡೆಸುತ್ತಿದ್ದು ಹಿರಿಯ ಆಟಗಾರರೊಂದಿಗೆ ಯುವ ಪ್ರತಿಭೆಗಳಿಗೂ ಹೆಚ್ಚು ಅವಕಾಶ ನೀಡುತ್ತಿರುವುದು ಉತ್ತಮ ಬೆಳವಣಿಗೆ.

ಮುಂದಿನ ವಿಶ್ವಕಪ್ ಇಂಗ್ಲೆಂಡ್‍ನಲ್ಲೇ ನಡೆಯು ವುದರಿಂದ ತಂಡವನ್ನು ಬಲಿಷ್ಠಗೊಳಿಸಲು ಆಂಗ್ಲರ ನಡುವಿನ ಸರಣಿಯು ಉತ್ತಮ ವೇದಿಕೆಯಾಗಿದೆ. ಇಯೋನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯವನ್ನು ಗೆದ್ದಿರುವ ವಿರಾಟ್ ಪಡೆ ಇಂದು ನಡೆಯುವ ಎರಡನೇ ಪಂದ್ಯವನ್ನು ಜಯಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳಲಿ.

ಮೊದಲ ಟ್ವೆಂಟಿ-20 ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಕರಕೌಶಲ್ಯತೆಯಿಂದ ಶತಕ ಸಿಡಿಸಿರುವ ಕೆ.ಎಲ್.ರಾಹುಲ್, ತಂಡದ ಮತ್ತೊಬ್ಬ ಮಾಸ್ಟರ್ ಪೀಸ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ, ಇದಕ್ಕೆ ನಾಯಕ ಕೊಹ್ಲಿ ಕೂಡ ಉತ್ತಮ ಬೆಂಬಲ ನೀಡಿದ್ದಾರೆ. ಯುವ ಬೌಲರ್‍ಗಳಾದ ಕುಲ್‍ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಕೂಡ ಉತ್ತಮ ಬೌಲಿಂಗ್ ಪ್ರದರ್ಶಿಸಿ ಆಂಗ್ಲರ ಪಡೆಯಲ್ಲಿರುವ ಜೋ ರೂಟ್, ಇಯಾನ್ ಮಾರ್ಗನ್, ಹಾಲ್ಸ್ ರಂತಹ ಬ್ಯಾಟಿಂಗ್ ಸ್ಪೆಷಾಲಿಸ್ಟ್‍ಗಳನ್ನು ಕಟ್ಟಿ ಹಾಕಿರುವ ರೀತಿ ಗಮನಿಸಿದರೆ ಇವರು ಕೂಡ ಮುಂಬರುವ ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದರು.

Facebook Comments

Sri Raghav

Admin