ಭೂತಾನ್ ಪ್ರಧಾನಿ ಜತೆ ಮೋದಿ ದ್ವಿಪಕ್ಷೀಯ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Bhutan--01

ನವದೆಹಲಿ, ಜು.6- ಭಾರತ ಭೇಟಿಯಲ್ಲಿರುವ ಭೂತಾನ್ ಪ್ರಧಾನಮಂತ್ರಿ ಶೇರಿಂಗ್ ಟೊಬ್‍ಗೇ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ರಾಜಧಾನಿ ದೆಹಲಿಯಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು.ಉಭಯ ದೇಶಗಳ ನಡುವೆ ರಕ್ಷಣೆ, ಭದ್ರತೆ ಹಾಗೂ ಮಹತ್ವದ ಸಹಭಾಗಿತ್ವ ಕುರಿತ ವಿಷಯಗಳು ಮುಖ್ಯವಾಗಿ ಚರ್ಚೆಗೆ ಗ್ರಾಸವಾದವು.

PM Modi  02

ಮೂರು ದಿನಗಳ ಭಾರತ ಭೇಟಿಗಾಗಿ ನಿನ್ನೆ ದೆಹಲಿಗೆ ಆಗಮಿಸಿದ ಭೂತಾನ್ ಪ್ರಧಾನಿ ಹೈದರಾಬಾದ್ ಹೌಸ್‍ನಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.

PM Modi  03 PM Modi  01

Facebook Comments

Sri Raghav

Admin