ದರೋಡೆಕೋರನನ್ನು ಸೆರೆ ಹಿಡಿದ ಕಾನ್ಸ್ಟೇಬಲ್’ಗೆ ಸನ್ಮಾನ, ಬಹುಮಾನ, ಹಾಲಿಡೇ ಪ್ಯಾಕೇಜ್

ಈ ಸುದ್ದಿಯನ್ನು ಶೇರ್ ಮಾಡಿ

Police-Venkatesh--01

ಬೆಂಗಳೂರು, ಜು.6- ಸಿನಿಮೀಯ ರೀತಿಯಲ್ಲಿ ನಾಲ್ಕು ಕಿಲೋಮೀಟರ್ ಬೆನ್ನಟ್ಟಿ ಹೋಗಿ ಮೊಬೈಲ್ ದರೋಡೆಕೋರನನ್ನು ಸೆರೆ ಹಿಡಿದ ಬೆಳ್ಳಂದೂರು ಠಾಣೆಯ ಕಾನ್ಸ್‍ಟೇಬಲ್ ಎಂ.ವಿ.ವೆಂಕಟೇಶ್ ಅವರಿಗೆ 10 ಸಾವಿರ ರೂ. ನಗದು ಬಹುಮಾನ ಹಾಗೂ ಹಾಲಿಡೇ ಪ್ಯಾಕೇಜ್ ಒಂದನ್ನು ನೀಡಲಾಗಿದೆ. ನಿನ್ನೆ ಮುಂಜಾನೆ ಸುಮಾರು 2.45ರಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಜಾಪುರ ರಸ್ತೆಯ ಬಿಗ್‍ಬಜಾರ್ ಬಳಿ ಹನುಮಂತ ಎಂಬುವವರು ಮೊಬೈಲ್‍ನಲ್ಲಿ ಮಾತಾಡಿಕೊಂಡು ಹೋಗುತ್ತಿದ್ದಾಗ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಮೊಬೈಲ್ ಕಿತ್ತುಕೊಂಡಿದ್ದಾರೆ. ಈ ವೇಳೆ ಹನುಮಂತು ಅವರು ಕಳ್ಳ ಕಳ್ಳ ಎಂದು ಜೋರಾಗಿ ಕೂಗಿಕೊಂಡಾಗ ಬೀಚ್‍ನಲ್ಲಿದ್ದ ವೆಂಕಟೇಶ್ ಅವರು ತಮ್ಮ ಬೈಕ್‍ನಲ್ಲಿ ಆರೋಪಿಗಳನ್ನು ಚೇಸ್ ಮಾಡಿದ್ದಾರೆ.

ಸುಮಾರು 4 ಕಿಲೋಮೀಟರ್‍ವರೆಗೂ ಬೆನ್ನಟ್ಟಿ ಹೋಗಿ ಆರೋಪಿಗಳಲ್ಲಿ ಒಬ್ಬನಾದ ಅರುಣ್ (20) ಎಂಬಾತನ ಡಿಯೋ ಬೈಕ್‍ಗೆ ತಮ್ಮ ಬೈಕನ್ನು ಡಿಕ್ಕಿ ಹೊಡೆಸಿ ಬೀಳಿಸಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವೆಂಕಟೇಶ್ ಅವರ ಸಾಹಸ ಹಾಗೂ ಧೈರ್ಯವನ್ನು ಮೆಚ್ಚಿ ಇಂದು ವೈಟ್‍ಫೀಲ್ಡ್ ವಿಭಾಗದಲ್ಲಿ ನಡೆದ ಕವಾಯತಿನಲ್ಲಿ ಅವರಿಗೆ 10 ಸಾವಿರ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಗಿದೆ.

Facebook Comments

Sri Raghav

Admin