ಕಳ್ಳಸಾಗಣೆಯಿಂದ 26 ಬಾಲಕಿಯರ ರಕ್ಷಿಸಿದ ಒಂದೇ ಒಂದು ಟ್ವೀಟ್..!

ಈ ಸುದ್ದಿಯನ್ನು ಶೇರ್ ಮಾಡಿ

Twitter

ನವದೆಹಲಿ, ಜು.7- ಕೇವಲ ಒಂದೇ ಒಂದು ಟ್ವೀಟ್ ಕಳ್ಳಸಾಗಣೆಯಾಗುತ್ತಿದ್ದ 26 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದೆ. ಸೋಷಿಯಲ್ ಮೀಡಿಯಾವನ್ನು ಸದ್ಭಳಕೆ ಮಾಡಿಕೊಂಡಿರೆ ಆಗುವ ದೊಡ್ಡ ಮಟ್ಟದ ಪ್ರಯೋಜನಕ್ಕೆ ಇದು ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಮುಜಾಫುರ್‍ಪುರ್-ಬಾಂದ್ರಾ ಔದ್ ಎಕ್ಸ್‍ಪ್ರೆಸ್ ರೈಲಿನಲ್ಲಿ 26 ಅಪ್ರಾಪ್ತ ಬಾಲಕಿಯರನ್ನು ಇಬ್ಬರು ವ್ಯಕ್ತಿಗಳು ಕರೆದೊಯ್ಯುತ್ತಿದ್ದರು. ಮಕ್ಕಳು ಅಳುತ್ತಿದ್ದುದ್ದನ್ನು ಗಮನಿಸಿ ಅನುಮಾನಗೊಂಡ ಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆಗೆ ಟ್ವೀಟ್ ಮಾಡಿದರು.

ಈ ಟ್ವೀಟ್ ನೋಡಿದ ರೈಲ್ವೆ ಅಧಿಕಾರಿಗಳು. ಮಾನವ ಕಳ್ಳಸಾಗಣೆ ಪ್ರತಿಬಂಧಕ ಘಟಕಕ್ಕೆ ಸುದ್ದಿ ಮುಟ್ಟಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಇಬ್ಬರು ಪೊಲೀಸರು ರೈಲು ಹತ್ತಿ ಕಪತ್‍ಗಂಜ್‍ನಿಂದ ಗೋರಖ್‍ಪುರದವರೆಗೆ ಭದ್ರತೆ ಒದಗಿಸಿದರು. ನಂತರ ಜಿಆರ್‍ಪಿ ಮತ್ತು ಆರ್‍ಪಿಎಫ್ ಪೊಲೀಸರು ಬಾಲಕಿಯರನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದರು. ಒಂದೇ ಒಂದು ಟ್ವೀಟ್ ಮತ್ತು ಕೇವಲ ಅರ್ಧ ಗಂಟೆಯೊಳಗೆ ಇದು ಸಾಧ್ಯವಾಗಿದೆ. ಇವರೆಲ್ಲರೂ ಬಿಹಾರದ ಚಂಪಾರಣ್ಯಕ್ಕೆ ಸೇರಿದವರಾಗಿದ್ದು, ಅವರನ್ನು ಸರಕ್ತಿಯಾಗಂಜ್‍ನಿಂದ ಇದ್ಯಾಗೆ ಅಕ್ರಮವಾಗಿ ಕರೆದೊಯ್ಯಲಾಗುತ್ತಿತ್ತು.

Facebook Comments

Sri Raghav

Admin