ಬಸವ ವಸತಿ ಯೋಜನೆಯಲ್ಲಿ ಹಣ ಪಡೆದು ಎಸಿಬಿಗೆ ಸಿಕ್ಕಿ ಬಿದ್ದ ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

ACB
ಕೊಡಗು, ಜು.7-ಬಸವ ವಸತಿ ಯೋಜನೆಯ ಹಣ ಮಂಜೂರಾತಿ ಬಗ್ಗೆ ಕಂಪ್ಯೂಟರ್‍ನಲ್ಲಿ ಅಪ್‍ಡೇಟ್ ಮಾಡಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಗ್ರಾ.ಪಂ. ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕು ಬ್ಯಾಡಗೊಟ್ಟ ಹೋಬಳಿ ಹಾರೋಹಳ್ಳಿ ಗ್ರಾಮದ ನಿವಾಸಿ ಚಂದ್ರಶೇಖರ್ ಅವರು ಪತ್ನಿ ಹೆಸರಿನಲ್ಲಿ ಬಸವ ವಸತಿ ಯೋಜನೆಯ ಹಣ ಮಂಜೂರಾತಿ ಬಗ್ಗೆ ಕಂಪ್ಯೂಟರ್‍ನಲ್ಲಿ ಅಪ್‍ಡೇಟ್ ಮಾಡಲು ಬ್ಯಾಡಗೊಟ್ಟ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಸುಂದರ್ ಮತ್ತು ಉಪಾಧ್ಯಕ್ಷ ಅಹಮ್ಮದ್ 5 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ನಿನ್ನೆ ಅರ್ಜಿದಾರರಿಂದ ಇವರಿಬ್ಬರು 5 ಸಾವಿರ ಹಣ ಸ್ವೀಕರಿಸುತ್ತಿದ್ದಾಗ ಕೊಡಗು ಜಿಲ್ಲಾ ಎಸಿಬಿ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

Facebook Comments