3 ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Amaranath-Yatra--01
ಶ್ರೀನಗರ, ಜು.7- ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರಿಕರ ಪರದಾಟ ಮತ್ತು ಅತಂತ್ರ ಸ್ಥಿತಿ ನಡುವೆ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು ಜಮ್ಮುವಿನಿಂದ ಪುನಾರಂಭಗೊಂಡಿದೆ. ಬಾಲ್‍ತಾಲ್ ಮಾರ್ಗದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಭೂಕುಸಿತ ಉಂಟಾಗಿ ಐವರು ಮೃತಪಟ್ಟ ನಂತರ ಕಳೆದ ಮೂರು ದಿನಗಳಿಂದ ಈ ಮಾರ್ಗದಲ್ಲಿ ಯಾತ್ರೆಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸಲಾಗಿತ್ತು.

ಭೂಕುಸಿತ ಮತ್ತು ಬಂಡೆಗಳು ಪುಡಿಯಾಗಿ ಕಲ್ಲುಗಳು ಬೀಳುತ್ತಿರುವುದರಿಂದ ಈ ಮಾರ್ಗವು ಅಪಾಯಕಾರಿ ಎಂದು ಪರಿಗಣಿಸಿ ಯಾತ್ರೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಇಂದು ಯಾತ್ರೆ ಆರಂಭವಾಗಿದ್ದು, 2,200 ಯಾತ್ರಿಕರು ಪಹಲ್‍ಗಮ್ ಶಿಬಿರದತ್ತ ಪ್ರಯಾಣ ಬೆಳೆಸಿದರು.

Facebook Comments

Sri Raghav

Admin